ADVERTISEMENT

ತಾಳಿಕೋಟೆ: ಹಿರೂರು ಶ್ರೀ ಪಂಚಭೂತಗಳಲ್ಲಿ ಲೀನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:12 IST
Last Updated 17 ಜನವರಿ 2026, 6:12 IST
ತಾಳಿಕೋಟೆ ತಾಲ್ಲೂಕಿನ ಹಿರೂರು ಗ್ರಾಮದಲ್ಲಿ ಲಿಂ. ಶಾಂತವೀರ ಶಿವಯೋಗಿ ಶಿವಾಚಾರ್ಯರ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು
ತಾಳಿಕೋಟೆ ತಾಲ್ಲೂಕಿನ ಹಿರೂರು ಗ್ರಾಮದಲ್ಲಿ ಲಿಂ. ಶಾಂತವೀರ ಶಿವಯೋಗಿ ಶಿವಾಚಾರ್ಯರ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು   

ತಾಳಿಕೋಟೆ: ತಾಲ್ಲೂಕಿನ ಹಿರೂರು ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ 35ನೇ ಪೀಠಾಧಿಪತಿ ಶಾಂತವೀರ ಶಿವಯೋಗಿ ಶಿವಾಚಾರ್ಯರು ಶುಕ್ರವಾರ ಪಂಚಭೂತಗಳಲ್ಲಿ ಲೀನವಾದರು.

ನೂರಾರು ಹರಗುರು ಚರಮೂರ್ತಿಗಳು, ಸಾವಿರಾರು ಭಕ್ತರ ಶೋಕಸಾಗರದ ನಡುವೆ ಶ್ರೀಗಳ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. 

ಇದಕ್ಕೂ ಮೊದಲು, ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನಂತರ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಶ್ರೀಮಠದ ಆವರಣದಲ್ಲಿ ಲಿಂಗಾಯತ ಸಂಪ್ರದಾಯದಂತೆ ಸಾತನೂರು ಸ್ವಾಮೀಜಿ ಹಾಗೂ ಜಾಲಹಳ್ಳಿ ಸ್ವಾಮೀಜಿ ಅಂತ್ಯಕ್ರಿಯೆ ನೆರವೇರಿಸಿದರು. ವಿವಿಧ ಶ್ರೀಗಳು ನುಡಿನಮನ ಸಲ್ಲಿಸಿದರು.

ADVERTISEMENT

ಮಠದ 36ನೇ ಪೀಠಾಧಿಪತಿ ಜಯಗುರು ಸಿದ್ದೇಶ್ವರ ಶಿವಾಚಾರ್ಯರು, ಕಾಶಿ, ತಾಳಿಕೋಟೆ, ಗುಂಡಕನಾಳ, ಜಾಲಹಳ್ಳಿ, ಮಾಗಣಗೇರಿ, ಕುಂಟೋಜಿ, ಪಡೇಕನೂರ, ಸಿಂದಗಿ, ತುಂಬಗಿ, ಕಾರಟಗಿ, ನಾವದಗಿ, ಗುಳಬಾಳ, ದೇವರಹಿಪ್ಪರಗಿ, ಢವಳಗಿ, ಗಿರಿಸಾಗರ, ವಡವಡಗಿ, ತಡವಲಗಾ, ಆಲಮೇಲದ ಮಠಾಧೀಶರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.