ತಾಳಿಕೋಟೆ: ಪಟ್ಟಣಕ್ಕೆ ಮಂಗಳವಾರ ಆಗಮಿಸಿದ ಇಂಡಿ-ರಾಯಚೂರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು, ಅಂದಾಜು ₹5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಹಣವಿದ್ದ ಬ್ಯಾಗ್ ಅನ್ನು ಅಲ್ಲಿಯೇ ಮರೆತು ಬಸ್ ಇಳಿದರು. ಬಳಿಕ ಬಸ್ ನಿರ್ವಾಹಕ ಅದನ್ನು ಅವರಿಗೆ ಹಿಂದುರಿಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಹಗರಟಗಿ ಗ್ರಾಮದ ಸುನಿತಾ ಸಜ್ಜನ ತಮ್ಮ ಜೊತೆಗೆ ತಂದಿದ್ದ ಬ್ಯಾಗ್ ಮರೆತು ಬಸ್ ಇಳಿದಿದ್ದಾರೆ. ಬಸ್ ನಿಲ್ದಾಣ ದಾಟಿ ಹೋದ ಮೇಲೆ ನೆನಪಾಗಿ, ನಿಲ್ದಾಣದಲ್ಲಿ ನಿಯಂತ್ರಕರ ಹತ್ತಿರ ಕಳೆದುಕೊಂಡ ಬ್ಯಾಗಿನ ಕುರಿತು ತಿಳಿಸಿದ್ದಾರೆ.
ರಾಯಚೂರಿನ ಎರಡನೇ ಬಸ್ ಘಟಕದಲ್ಲಿ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಹುಸೇನೆಸಾಬ್ ಮಕಾನದಾರ, ಅವರು ಬ್ಯಾಗ್‌ನಲ್ಲಿ ಚಿನ್ನಾಭರಣ ಇರುವುದನ್ನು ಗಮನಿಸಿ, ಬಸ್ ನಿಲ್ದಾಣಕ್ಕೆ ಮರಳಿ ಬಂದು, ಮಹಿಳೆಗೆ ಬ್ಯಾಗ್ ಮರಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.