ADVERTISEMENT

ಪ್ರಜಾಸೌಧ ಕಟ್ಟಡ ಸ್ಥಳಾಂತರಕ್ಕೆ ಆಗ್ರಹ: ಬಂದ್ ಯಶಸ್ವಿ, ಅನಿರ್ದಿಷ್ಟಾವಧಿ ಹೋರಾಟ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:44 IST
Last Updated 26 ಫೆಬ್ರುವರಿ 2026, 5:44 IST
ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಬಸವೇಶ್ವರ ವೃತ್ತದ ಬಳಿ ಹೋರಾಟಗಾರರು ಬುಧವಾರದಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದರು
ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಬಸವೇಶ್ವರ ವೃತ್ತದ ಬಳಿ ಹೋರಾಟಗಾರರು ಬುಧವಾರದಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದರು   

ತಾಳಿಕೋಟೆ: ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ನೀಡಲಾಗಿದ್ದ ತಾಳಿಕೋಟೆ ಬಂದ್ ಕರೆಗೆ ಬುಧವಾರ ಪಟ್ಟಣದಲ್ಲಿ ಸ್ವಯಂಪ್ರೇರಿತ ಬೆಂಬಲ ವ್ಯಕ್ತವಾಯಿತು.

‘ತಾಲ್ಲೂಕು ಆಡಳಿತವು ಮೈಲೇಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಿಸಲು ಸ್ಥಳ ಗುರುತಿಸಿದ್ದು, ಈ ಸ್ಥಳ ತಾಳಿಕೋಟೆ ಪಟ್ಟಣದಿಂದ ಸುಮಾರು 4 ರಿಂದ 5 ಕಿ.ಮೀ ದೂರದಲ್ಲಿದೆ. ಇದರಿಂದ ತಾಲ್ಲೂಕಿನ ಸಾರ್ವಜನಿಕರಿಗೆ, ವಿಶೇಷವಾಗಿ ವೃದ್ಧರು, ಮಹಿಳೆಯರು ಹಾಗೂ ಅಂಗವಿಕಲರಿಗೆ ತೊಂದರೆ ಉಂಟಾಗುತ್ತದೆ’ ಎಂದು ಪ್ರತಿಭಟನಕಾರರು ದೂರಿದರು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಆರ್.ಎಸ್. ಪಾಟೀಲ್ ಮಾತನಾಡಿ, ‘ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಯಾರ ಪರವೂ ಅಲ್ಲ. ಇದರಲ್ಲಿ ರಾಜಕೀಯ ಇಲ್ಲ. ನಾವು ಈ ಪ್ರತಿಭಟನೆಯಲ್ಲಿ ಒಂದೇ ಒಂದು ಧಿಕ್ಕಾರ ಹಾಕಿಲ್ಲ. ನಮ್ಮ ಉದ್ದೇಶ ಒಂದೇ. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಜಾಸೌಧ ನಗರದ ಒಳಗೇ ನಿರ್ಮಾಣ ಆಗಬೇಕು’ ಎಂದು ಹೇಳಿದರು.

ADVERTISEMENT

ಪ್ರಮುಖರಾದ ಕಾಶೀನಾಥ್ ಮುರಾಳ ಮಾತನಾಡಿ, ‘ಈಗ ಗುರುತಿಸಿರುವ ಸ್ಥಳವು ಸಾರ್ವಜನಿಕರಿಗೆ ಅನುಕೂಲಕರವಲ್ಲ. ಆದ್ದರಿಂದ ಪ್ರಜಾಸೌಧ ಕಟ್ಟಡವನ್ನು ತಾಳಿಕೋಟೆ ಪಟ್ಟಣ ವ್ಯಾಪ್ತಿಯಲ್ಲಿಯೇ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತಗೊಳಿಸಿ, ಬಂದ್ ಮಾಡಿದ ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಬೀದಿಬದಿ ವ್ಯಾಪಾರಸ್ಥರು ಹಾಗೂ ಎಲ್ಲ ಸಮುದಾಯಗಳ ಮುಖಂಡರು ಬೆಂಬಲ ಸೂಚಿಸಿದರು.

ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು. ನಂತರ ಬಸವೇಶ್ವರ ವೃತ್ತದ ಬಳಿ ಹೋರಾಟಗಾರರು ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದರು. ಹೋರಾಟ ಸಮಿತಿಯ ಅಧ್ಯಕ್ಷರಾದ ದಶರಥಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಎಂ.ಕೆ. ಜೋರಗಸ್ತಿ, ಮಾಸುಮಸಾಬ ಕೆಂಭಾವಿ, ಪರಶುರಾಮ ತಂಗಡಗಿ, ಪ್ರಕಾಶ್ ಹಜೇರಿ, ರವೀಂದ್ರ ಕಟ್ಟಿಮನಿ, ದತ್ತು ಹೆಬಸೂರ, ರಾಜು ಹಂಚಾಟೆ, ಗಂಗಾಧರ್ ಕಸ್ತೂರಿ, ಮಂಜು ಶೆಟ್ಟಿ, ಸುರೇಶ ಹಜೇರಿ, ಸದ್ದಾಂ ಬೀಳಗಿ, ಲತೀಫ್ ಬೀಳಗಿ, ಅಮಿತ್ ಮನಗೂಳಿ, ನಾಗೇಶ ಕಟ್ಟಿಮನಿ, ಮಹೇಶ ಕಟ್ಟಿಮನಿ, ಪ್ರಮೋದ ಅಗರವಾಲ, ತಿಪ್ಪಣ್ಣ ಸಜ್ಜನ, ಮಾನಸಿಂಗ ಕೊಕಟನೂರ, ಸಿರಸಕುಮಾರ ಹಜೇರಿ, ನಿತಿನ ವಿಜಾಪುರ್ ಇದ್ದರು.

ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ನೀಡಲಾಗಿದ್ದ ತಾಳಿಕೋಟೆ ಬಂದ್ ಕರೆಗೆ ಸ್ಪಂದಿಸಿ ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು
ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಹೋರಾಟಗಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.