ತಾಂಬಾ: ದಸರಾ ಎಂದಾಕ್ಷಣ ಹಲವರಿಗೆ ಮೈಸೂರು ಮಾತ್ರವೇ ನೆನಪಾಗಬಹುದು. ಆದರೆ ವಿಜಯಪುರ ಜಿಲ್ಲೆಯ ತಾಂಬಾ ಗ್ರಾಮದಲ್ಲಿ ಅದರಷ್ಟೇ ಸಂಭ್ರಮದಿಂದ ಈ ಉತ್ಸವ ಭಕ್ತಿ ಮತ್ತು ವೈಭವದಿಂದ ನಡೆದು ಬಂದಿದೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ಸೋಮವಾರ ಅಂಬಾಭವಾನಿ ಎಜುಕೇಶನ್ ಟ್ರಸ್ಟ , ಜಗದಂಬಾ ವಿದ್ಯಾವರ್ಧಕ ಸಂಘ ಹಾಗೂ ಸಾರ್ವಜನಿಕರ ಸಹಕಯೋಗದೊಂದಿಗೆ ಹಮ್ಮಿಕೊಂಡ ನಾಡದೇವಿ ನವರಾತ್ರಿ ಉತ್ಸವ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು ನಾಡದೇವಿ ನವರಾತ್ರಿ ಉತ್ಸವ ಉತ್ತರ ಕರ್ನಾಟಕದ ದಸಾರಾ ಎಂದೇ ಈ ಭಾಗದಲ್ಲಿ ಖ್ಯಾತಿಯಾಗಿದೆ. ಸತತವಾಗಿ 54ವರ್ಷಗಳಿಂದ ನವರಾತ್ರಿ ಹಬ್ಬ ಆಚರಿಸುತ್ತಾ ಬರಲಾಗಿದೆ. ನಾಗಠಾಣದ ಮಾಜಿ ಶಾಸಕ ದೇವಾನಂದ ಚವ್ಹಾಣ ಮತ್ತು ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ನವರಾತ್ರಿ ಉತ್ಸವ ಜನರಲ್ಲಿ ನೆನಪುಳಿಯುವಂತೆ ಆಗಿದೆ ಎಂದರು.
ಕೆ.ಎಮ್.ಎಫ್. ಮಾಜಿ ರಾಜ್ಯಾಧ್ಯಕ್ಷ ಎಸ್.ಭೀಮಾ ನಾಯಕ ಮಾತನಾಡಿದರು. ನವರಾತ್ರಿ ಉತ್ಸವದಲ್ಲಿ ಶಿರಶ್ಯಾಡ ಗ್ರಾಮದ ಅಭಿನವ ಮುರುಗೇಂದ್ರ ಶ್ರೀಗಳು, ಕಾತ್ರಾಳ ಗುರುದೇವಾಶ್ರಮ ಅಮೃತಾನಂದ ಶ್ರೀಗಳು, ಸಾನ್ನಿಧ್ಯವನ್ನು ವಹಿಸುವರು.
ಸಿಂದಗಿ ಮಾಜಿ ಶಾಸಕ ರಮೇಶ ಭೂಸನೂರ ಮುಂತಾದವರು ಮಾತನಾಡಿದರು. ನಾಗಠಾಣ ಮಾಜಿ ಶಾಸಕ ದೇವಾನಂದ ಎಫ್ ಚವ್ಹಾಣ ಮತ್ತು ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ, ಪ್ರಭುಗೌಡ ಪಾಟೀಲ (ಲಿಂಗದಳ್ಳಿ) ಜಿ.ಬಿ.ಅಂಗಡಿ, ಆರ್.ಕೆ.ನಾಯಕ, ನಾರಾಯಣ ರಾಠೋಡ, ಪರಮೇಶ್ವರ ರಾಠೋಡ, ಹಮೀದ ಮುಶ್ರೀಪ, ನಂದು ಓಸ್ವಾಲ್, ಸಂತೋಷ ಚವ್ಹಣ, ಸುಮಿತ್ರಾ ಚವ್ಹಾಣ, ಪ್ರಾಚಾರ್ಯರು ಸುನೀತಾ ಚವ್ಹಾಣ, ಜಿ.ಪಂ.ಮಾಜಿ ಸದಸ್ಯೆ ಮಮಿತಾ ಚವ್ಹಾಣ, ರಜಾಕ ಚಿಕ್ಕಗಸಿ, ಕಸ್ತೂರಿಬಾಯಿ ದೊಡಮನಿ, ತಾರಸಿಂಗ ದೊಡಮನಿ, ಶ್ರೀಮಂತ ದೊಡಮನಿ, ಜೆ.ಎಸ್.ಹತ್ತಳ್ಳಿ, ರಾಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ರಾಮಚಂದ್ರ ದೊಡಮನಿ, ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.