ವಿಜಯಪುರ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಐಟಿ ಶಿಕ್ಷಣ ಗುಣಮಟ್ಟಗಳ ಮಂಡಳಿ (ಬೈಟ್ಸ್) ಆಯೋಜಿಸಿದ್ದ ಟಿಸಿಎಸ್ ಟೆಕ್‌ಬೈಟ್ಸ್‌ನ 13ನೇ ಆವೃತ್ತಿಯಲ್ಲಿ ವಿಜಯಪುರ ನಗದ ಬಿಎಲ್‌ಡಿಇಎ ಎಂಜಿನಿಯರಿಂಗ್ ಕಾಲೇಜಿನಐಮನ್ ಪಾಟೀಲ್ ವಿಜೇತರಾಗಿದ್ದು, ₹ 85 ಸಾವಿರ ವಿದ್ಯಾರ್ಥಿ ವೇತನ ಪಡೆದುಕೊಂಡಿದ್ದಾರೆ.
ಬೆಳಗಾವಿಯ ಕೆಎಲ್‌ಇ ಡಾ. ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿನಧೀರಜ್ ದಾನೇಶ ಅಂಗಡಿ ರನ್ನರ್ ಅಪ್ ಆಗಿದ್ದಾರೆ. ₹50 ಸಾವಿರವಿದ್ಯಾರ್ಥಿ ವೇತನ ನೀಡಲಾಯಿತು.
ಟಿಸಿಎಸ್ ಬೆಂಗಳೂರು ವಿಭಾಗದ ಮುಖ್ಯಸ್ಥ ಸುನೀಲ್ ದೇಶಪಾಂಡೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರೊ.ಜಿ.ಜಗದೀಶ್ ಮತ್ತು ಬೈಟ್ಸ್ ಅಧ್ಯಕ್ಷ ಡಾ.ಕೆ.ಎನ್.ಬಾಲಸುಬ್ರಮಣ್ಯ ಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.