ADVERTISEMENT

ಸಾಂಸ್ಕೃತಿಕ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಅಪಾರ: ಎನ್.ಎಂ ಬಿರಾದಾರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 16:00 IST
Last Updated 20 ಅಕ್ಟೋಬರ್ 2024, 16:00 IST
ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ನಡೆದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ ಬಿರಾದಾರ ಉದ್ಘಾಟಿಸಿದರು.
ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ನಡೆದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ ಬಿರಾದಾರ ಉದ್ಘಾಟಿಸಿದರು.   

ವಿಜಯಪುರ: ‘ಕಲೆ, ಸಾಹಿತ್ಯ, ಸಂಗೀತ, ನಾಟಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರ. ಜಿಲ್ಲೆಯ ಫಲವತ್ತಾದ ಭೂಮಿ ಇನ್ನೊಂದು ಜಿಲ್ಲೆಗಿಲ್ಲ. ಸಾಮರಸ್ಯದ ನೆಲ ವಿಜಯಪುರ’ ಎಂದು ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಎನ್.ಎಂ ಬಿರಾದಾರ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ನಡೆದ ನೀಲಮ್ಮ ಮುತ್ತಪ್ಪ ಸಂಕಣ್ಣನವರ ಹಾಗೂ ನಿಂಗಮ್ಮ ಗುರಪ್ಪ (ಬೋಳಶೆಟ್ಟಿ) ಯಾದವಾಡ ವರ ಹೆಸರಿನ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   

‘ವಿಜಯಪುರ ಜಿಲ್ಲೆ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಅತ್ಯಂತ ವಿಸ್ತಾರವಾಗಿ ಬೆಳೆದಿದೆ. ಜಿಲ್ಲೆಯಾದ್ಯಂತ ಉತ್ತಮ ಸಾಹಿತ್ಯದ ವಾತಾವರಣ ಪಸರಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಅನನ್ಯ’ ಎಂದರು.

ADVERTISEMENT

ವಿಶ್ರಾಂತ ಪ್ರಾಚಾರ್ಯ ಪ್ರೊ. ಸಿದ್ದಣ್ಣ ಸಾತಲಗಾಂವ ಮಾತನಾಡಿ, ‘ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಗೋಷ್ಠಿಗಳು ಅತ್ಯಂತ ವ್ಯವಸ್ಥಿತವಾಗಿ ನಡೆದುಕೊಂಡು ಹೋಗುತ್ತಿರುವುದು ಶ್ಲಾಘನೀಯ’ ಎಂದರು.

‘ಶಿವಶರಣೆ ಗುಡ್ಡಾಪುರ ದಾನಮ್ಮದೇವಿಯ’ ಕುರಿತು ಉಪನ್ಯಾಸ ನೀಡಿದ ಸಾಹಿತಿ ಅನ್ನಪೂರ್ಣ ಚೋಳಕೆ, ‘ಉಮರಾಣಿಯ ಅನಂತರಾಯ ಮತ್ತು ಶಿರಸಮ್ಮ ದಂಪತಿಯ ಉದರದಲ್ಲಿ ಜನಿಸಿ ಲೋಕೋದ್ಧಾರ ಮಾಡಿದ ಮಹಾ ಶಿವಶರಣೆ ದಾನಮ್ಮ ದೇವಿ. ಅವರು ಅನೇಕ ಪವಾಡಗಳನ್ನು ನಡೆಸಿದ್ದಾರೆ’ ಎಂದರು.

‘ಕಲಕೇರಿಯ ಮಡಿವಾಳೇಶ್ವರರ’ ಕುರಿತು ಉಪನ್ಯಾಸ ನೀಡಿದ ಸಾಹಿತಿ ರೇವತಿ ಬೂದಿಹಾಳ, ‘ಕಲಕೇರಿಯ ಮಡಿವಾಳೇಶ್ವರರು 12ನೇ ಶತಮಾನದ ಬಸವ ಚಳವಳಿಯಲ್ಲಿ ಕಲ್ಯಾಣ ಕ್ರಾಂತಿಯ ನಂತರ ತಮ್ಮ ಗುರುಗಳೊಂದಿಗೆ ಒಂದೇ ಕಡೆ ನೆಲೆ ನಿಂತು ಉದ್ಧರಿಸಿದ ಶ್ರೇಷ್ಠ ಮಹಿಮರು. ಅವರ ಕಾಯಕ ನಿಷ್ಠೆ ನಮಗೆ ದಾರಿದೀಪವಾಗಲಿ’ ಎಂದರು.

ಶಶಿಧರ ಸಂಕಣ್ಣನವರ, ಮ.ಗು. ಯಾದವಾಡ, ಜ್ಯೊತಿರಾಮ ಪವಾರ, ನಬಿಲಾಲ ಕರಜಗಿ, ಫಾರೂಖ್ ಮೇಲಿನಮನಿ, ಶಿವಪುತ್ರ ಬಿರಾದಾರ, ಸಂಗಮೇಶ ಮೇತ್ರಿ, ಆನಂದ ಕುಲಕರ್ಣಿ, ಮಮತಾ ಮುಳಸಾವಳಗಿ, ಸಿದ್ರಾಮಯ್ಯ ಲಕ್ಕುಂಡಿಮಠ, ವಿ.ಡಿ. ಐಹೊಳ್ಳಿ, ಹಾಸಿಂಪೀರ ವಾಲೀಕಾರ, ಮಾಧವ ಗುಡಿ, ಕಮಲಾ ಮುರಾಳ, ಜಯಶ್ರೀ ಹಿರೇಮಠ, ವಿಜಯಲಕ್ಷ್ಮಿ ಹಳಕಟ್ಟಿ, ರಾಜೇಸಾಬ ಶಿವನಗುತ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.