ತಾಳಿಕೋಟೆ: ‘ಕಾಲೇಜು ದಿನಗಳಲ್ಲಿ ನಮ್ಮ ಬದುಕಿಗೆ ನೆರವಾಗಿ ಬದುಕು ಕಟ್ಟಿಕೊಟ್ಟದ್ದು ಈ ಗ್ರಂಥಾಲಯ, ಓದಿನ ಹುಚ್ಚು ಹಚ್ಚಿದ್ದು ಗ್ರಂಥಾಲಯ’ ಎಂದು ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ.ಬಿರಾದಾರ ಹೇಳಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ತಮ್ಮ ಸಂಸ್ಥೆಯ ಪ್ರಕಾಶನದ 50ಸಾವಿರಕ್ಕೂ ಅಧಿಕ ಮೌಲ್ಯದ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿ ಅವರು ಮಾತನಾಡಿದರು.
‘ಐದು ವರ್ಷ ತಾಳಿಕೋಟೆಯಲ್ಲಿ ಅಧ್ಯಯನದ ಸಂದರ್ಭದಲ್ಲಿ ಕಾಲೇಜಿಗಿಂತ ಹೆಚ್ಚು ಲಾಭ ಪಡೆದುದು ಇದೇ ಗ್ರಂಥಾಲಯದಿಂದ. ಒಂದು ಅಕ್ಷರ, ಒಂದು ಪುಟ ಯಾರದೋ ಬದುಕನ್ನು ಬದಲಿಸಬಲ್ಲುದು. ಆದ್ದರಿಂದ ವ್ಯಕ್ತಿತ್ವ ವಿಕಸನ ಮತ್ತು ರಾಜ್ಯ ಕೇಂದ್ರ ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ಪುಸ್ತಗಳ ಮಾಲಿಕೆಯನ್ನು ನೀಡುತ್ತಿರುವೆ, ವಿದ್ಯಾರ್ಥಿಗಳು ಅದರಲ್ಲೂ ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಬಯಸುವವರಿಗೆ ಇವು ಉಪಯುಕ್ತವಾದರೆ ಅದೇ ಸಾರ್ಥಕತೆ’ ಎಂದರು.
ಶಾಖಾ ಗ್ರಂಥಪಾಲಕ ಕೃಷ್ಣಾ ಕುಲಕರ್ಣಿ, ಮುಖ್ಯಶಿಕ್ಷಕರುಗಳಾದ ಎಸ್.ಎಸ್.ಬಾಕಲಿ, ಎಸ್.ಎಸ್.ಗಡೇದ, ಶಿಕ್ಷಕ ಮಲ್ಲಿಕಾರ್ಜುನ ಚೌಧರಿ, ರಮೇಶ ಸಜ್ಜನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.