ಬಂಧನ
(ಸಾಂದರ್ಭಿಕ ಚಿತ್ರ)
ವಿಜಯಪುರ: ವಿಜಯಪುರ ಗ್ರಾಮೀಣ ಉಪವಿಭಾಗದ ಕ್ರೈಂ ಪೊಲೀಸರು ಬರಗಟಗಿ ಎಲ್.ಟಿ. ಹತ್ತಿರ ಮಹಾರಾಷ್ಟ್ರ ಮೂಲದ ನಾಲ್ಕು ಜನ ಕಳ್ಳರನ್ನು ಶುಕ್ರವಾರ ಬಂಧಿಸಿ, ಅವರಿಂದ ₹15 ಲಕ್ಷ ಮೌಲ್ಯದ ಒಟ್ಟು 208 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಸೋಲಾಪುರದ ನಂದಾಬಾಯಿ ಗಾಯಕವಾಡ (55), ಗಣೇಶ ನಾಗೇಶ ಜಾಧವ(35), ಮಹಾದೇವ ಪಿಂಟು ಗಾಯಕವಾಡ(35) ಹಾಗೂ ಸುಂದರಾಬಾಯಿ ಜಾಧವ(38) ಬಂಧಿತ ಆರೋಪಿಗಳು.
ಆರೋಪಿಗಳು ಸುಮಾರು ಎರಡು ವರ್ಷಗಳಿಂದ ಮಹಾರಾಷ್ಟ್ರದಿಂದ ಬಂದು ವಿಜಯಪುರ ಜಿಲ್ಲೆಯ ಡೋಮನಾಳ, ಶಿವಗಿರಿ, ದೇವರಹಿಪ್ಪರಗಿ ಹಾಗೂ ತಿಕೋಟಾ ಬಸ್ ನಿಲ್ದಾಣಗಳಲ್ಲಿ ಒಟ್ಟು 5 ಕಡೆ ಚಿನ್ನಾಭರಣಗಳನ್ನು ಕಳವು ಮಾಡಿರುವುದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.