ADVERTISEMENT

‘ತೋಂಟದ ಸಿದ್ಧಲಿಂಗಶ್ರೀ’ ಪುಸ್ತಕ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 19:05 IST
Last Updated 17 ನವೆಂಬರ್ 2025, 19:05 IST
   

ವಿಜಯಪುರ: ವಿಜಯಪುರದ ಕನ್ನಡ ಪುಸ್ತಕ ಪರಿಷತ್ತು ಪ್ರಸಕ್ತ ಸಾಲಿನ ‘ಡಾ. ತೋಂಟದ ಸಿದ್ಧಲಿಂಗ ಶ್ರೀ’ ಪುಸ್ತಕ ಪ್ರಶಸ್ತಿಗೆ ಐದು ಕೃತಿಗಳನ್ನ ಆಯ್ಕೆ ಮಾಡಿದ್ದು, ನವೆಂಬರ್ 19ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಪರಿಷತ್ತಿನ ಅಧ್ಯಕ್ಷ ಪ.ಗು.ಸಿದ್ದಾಪುರ ತಿಳಿಸಿದ್ದಾರೆ.

ಮಂಗಳೂರಿನ ರಾಜಶೇಖರ ಹಳೆಮನಿ ಅವರ ‘ಒಡಲುಗೊಂಡವರು’ ಕಾದಂಬರಿ, ವಿಜಯಪುರದ ರಮೇಶ ಕತ್ತಿ ಅವರ ‘ಬಿರುನೆಲದ ಕಾವ್ಯ’ ಕೃತಿ, ಬೆಂಗಳೂರಿನ ಮಹಾದೇವ ಬಸರಕೋಡ ಅವರ ‘ಸುರದೇನು’ ಕೃತಿ, ತಾಳಿಕೋಟೆಯ ಸುಜಾತಾ ಚಲವಾದಿ ಅವರ ‘ಲಚಮವ್ವ’ ಕಥಾ ಸಂಕಲನ ಮತ್ತು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಅಧಿಕಾರಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ‘ಹವೇಲಿ ದೊರೆಸಾನಿ’ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಪ್ರಶಸ್ತಿಯು ತಲಾ ₹10 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

‘ತೋಂಟದ ಸಿದ್ಧಲಿಂಗಶ್ರೀ’ ಸಮಗ್ರ ಪ್ರಶಸ್ತಿಗೆ ಮುಂಬೈನ ಸುಖಲಾಕ್ಷಿ ವೈ. ಸುವರ್ಣ, ಹೈದರಾಬಾದ್‌ನ  ಪೊಟ್ಲೂರಿ ಹರಿಕೃಷ್ಣ, ಬಾಗಲಕೋಟೆಯ ಬಸವರಾಜ ಗವಿಮಠ, ಧಾರವಾಡದ ಚನ್ನಪ್ಪ ಅಂಗಡಿ ಮತ್ತು ಅಕ್ಕಲಕೋಟದ ವಿದ್ಯಾ ಕಲ್ಯಾಣಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗಳು ತಲಾ ₹ 2 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.