ADVERTISEMENT

ಮೂವರು ಕಾರ್ಮಿಕರ ಸಾವು

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 20:23 IST
Last Updated 4 ಜೂನ್ 2019, 20:23 IST

ಇಂಡಿ (ವಿಜಯಪುರ): ಪಟ್ಟಣದ ಅಮರ್ ಇಂಟರ್‌ ನ್ಯಾಷನಲ್‌ ಹೋಟೆಲ್‌ನ ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಛಗೊಳಿಸಲು ಮಂಗಳವಾರ ಮುಸ್ಸಂಜೆ ಸಮಯ, ಟ್ಯಾಂಕ್‌ನೊಳಗಿಳಿದಿದ್ದ ಮೂವರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.

ನಬಿಲಾಲ್‌ ರಹಿಮಾನ್‌ಸಾಬ್‌ ಎಕ್ಕೆವಾಲೆ (26), ಬುಡುಸಾಬ್ ಬಾಗವಾನ (45), ಮುದಕಪ್ಪ ಕಟ್ಟೀಮನಿ (35) ಮೃತರು.

‘ಟ್ಯಾಂಕ್‌ ಸ್ವಚ್ಛಗೊಳಿಸಲು ಒಬ್ಬರು ಒಳಗಿಳಿದಿದ್ದಾರೆ. ಇದರ ಬೆನ್ನಿಗೆ ಮತ್ತೊಬ್ಬ, ನಂತರ ಮತ್ತೊಬ್ಬ ಹೀಗೆ ಮೂವರು ಟ್ಯಾಂಕ್‌ನೊಳಗಿಳಿದಿದ್ದಾರೆ. ಬಹು ಹೊತ್ತು ಕಳೆದರೂ ಮೂವರಲ್ಲಿ ಯಾರೊಬ್ಬರೂ ಮೇಲೆ ಬರದಿದ್ದರಿಂದ ಗಾಬರಿಗೊಂಡ ಹೋಟೆಲ್‌ನವರು ಪೊಲೀಸರಿಗೆ ಮಾಹಿತಿ ನೀಡಿದರು.’

ADVERTISEMENT

‘ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಟ್ಯಾಂಕ್‌ನೊಳಗೆ ಮೃತಪಟ್ಟಿದ್ದ ಮೂವರು ಕಾರ್ಮಿಕರನ್ನು ಮೇಲೆ ತೆಗೆದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಇಂಡಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.