ತಿಕೋಟಾ: ಪಟ್ಟಣದ ಅಥಣಿ ರಸ್ತೆಯಲ್ಲಿರುವ ಗುರು ಭವನದಲ್ಲಿ ಇದೇ 14ರ ಮಂಗಳವಾರ ಜಂಗಮ ವಟುಗಳ ಸಾಮೂಹಿಕ ಉಚಿತ ಅಯ್ಯಾಚಾರ ಹಾಗೂ ಧರ್ಮ ಸಭೆ ನಡೆಯಲಿದೆ.
ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ವಿರಕ್ತ ಮಠದ ಮಲ್ಲಿಕಾರ್ಜುನ ಸ್ವಾಮಿಗಳು, ನಾಗಠಾಣದ ಉದಯೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ದಾಶ್ಯಾಳ ಹಿರೇಮಠದ ಶಂಕ್ರಯ್ಯ ಶಾಸ್ತ್ರಿ, ಜ್ಯೋತಿಷಿ ಕಿರಣ ಜೋಷಿ ಅಯ್ಯಾಚಾರ ಹಾಗೂ ಧರ್ಮಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಆಸಕ್ತ ಜಂಗಮ ವಟುಗಳ ಪಾಲಕರು, ತಮ್ಮ ಮಕ್ಕಳ ಹೆಸರನ್ನು ಇದೇ 12ರವರೆಗೆ ನೋಂದಾಯಿಸಲು ಕೋರಲಾಗಿದೆ. 9845519355, 9972505626 ಸಂಪರ್ಕಿಸಿರಿ.
ಪರಿಹಾರ ವಿತರಣೆ
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಯಲ್ಲಪ್ಪ ಮಾಲಗಾರ ಈಚೆಗೆ ಸಿಡಿಲು ಬಡಿದು ಮೃತಪಟ್ಟಿದ್ದು, ಇವರ ಪತ್ನಿ ಬೌರವ್ವ ಮಾಲಗಾರ ಅವರಿಗೆ, ತಹಶೀಲ್ದಾರ್ ಎಸ್.ಎಸ್.ಸಂಪಗಾವಿ ₹ 5 ಲಕ್ಷ ಮೊತ್ತದ ಪರಿಹಾರ ಚೆಕ್ ವಿತರಿಸಿದರು.
ಕಂದಾಯ ನಿರೀಕ್ಷಕ ಎಸ್.ಎಸ್.ತಾವರಖೇಡ, ಹೊನವಾಡ ಗ್ರಾಮ ಲೆಕ್ಕಾಧಿಕಾರಿ ಎಂ.ಎ.ಅಕ್ಕಲಕೋಟ, ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.