ADVERTISEMENT

ಚಾಲಕ ಆವಟಿಗೆ ಸಾರಿಗೆ ಸಿಬ್ಬಂದಿ ಕಂಬನಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 16:07 IST
Last Updated 17 ಏಪ್ರಿಲ್ 2021, 16:07 IST
ಜಮಖಂಡಿ ತಾಲ್ಲೂಕಿನ ಕವಟಗಿಯಲ್ಲಿ ದುಷ್ಕರ್ಮಿಗಳ ಕಲ್ಲೇಟಿನಿಂದ ಸಾವಿಗೀಡಾದ ಚಾಲಕ ನಬಿ ರಸೂಲ್‌ ಆವಟಿ ಅವರಿಗೆ ವಿಜಯಪುರ ಘಟಕ ಒಂದರಲ್ಲಿ ಸಾರಿಗೆ ಸಿಬ್ಬಂದಿ ಮೌನಾಚರಣೆ ಮೂಲಕ ಸಂತಾಪ ವ್ಯಕ್ತಪಡಿಸಿದರು 
ಜಮಖಂಡಿ ತಾಲ್ಲೂಕಿನ ಕವಟಗಿಯಲ್ಲಿ ದುಷ್ಕರ್ಮಿಗಳ ಕಲ್ಲೇಟಿನಿಂದ ಸಾವಿಗೀಡಾದ ಚಾಲಕ ನಬಿ ರಸೂಲ್‌ ಆವಟಿ ಅವರಿಗೆ ವಿಜಯಪುರ ಘಟಕ ಒಂದರಲ್ಲಿ ಸಾರಿಗೆ ಸಿಬ್ಬಂದಿ ಮೌನಾಚರಣೆ ಮೂಲಕ ಸಂತಾಪ ವ್ಯಕ್ತಪಡಿಸಿದರು    

ವಿಜಯಪುರ: ಜಮಖಂಡಿ ತಾಲ್ಲೂಕಿನ ಕವಟಗಿಯಲ್ಲಿ ದುಷ್ಕರ್ಮಿಗಳ ಕಲ್ಲೇಟಿನಿಂದ ಸಾವಿಗೀಡಾದಚಾಲಕ ನಬಿ ರಸೂಲ್‌ ಆವಟಿ ಅವರಿಗೆ ವಿಜಯಪುರ ಘಟಕ ಒಂದರಲ್ಲಿ ಸಾರಿಗೆ ಸಿಬ್ಬಂದಿ ಮೌನಾಚರಣೆ ಮೂಲಕ ಸಂತಾಪ ವ್ಯಕ್ತಪಡಿಸಿದರು.

ಆವಟಿ ಅವರು 2015ರಲ್ಲಿ ಮುಖ್ಯಮಂತ್ರಿ ಪದಕ ಪಡೆದಾಗ ವಿಜಯಪುರದಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ಅವರ ಸೇವೆ ಶ್ಲಾಘನೀಯ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಸ್ಮರಿಸಿದರು.

111 ಬಸ್‌ ಕಾರ್ಯಾಚರಣೆ

ADVERTISEMENT

ಜಿಲ್ಲೆಯಲ್ಲಿ ಶನಿವಾರವೂ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಈ ನಡುವೆ ಜಿಲ್ಲೆಯಲ್ಲಿ 111 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಿವೆ ಎಂದು ನಾರಾಯಣಪ್ಪ ಕುರುಬರ ತಿಳಿಸಿದರು.

ಬೆಳಗಾವಿ ಚುನಾವಣಾ ಕರ್ತವ್ಯಕ್ಕೆ ತೆರಳಿರುವ ಬಸ್‌ಗಳು ಭಾನುವಾರ ಜಿಲ್ಲೆಗೆ ಮರಳಲಿವೆ. ಸೋಮವಾರದಿಂದ ಜಿಲ್ಲೆಯಲ್ಲಿ ಸಾರಿಗೆ ಸಂಚಾರ ಪೂರ್ಣ ಪ್ರಮಾಣದಲ್ಲಿ ಸರಿಹೋಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.