ಸಿಂದಗಿ: ದೂಳುಮಯ ಸಿಂದಗಿ ಪಟ್ಟಣದ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದರೂ ಮಾಡಬೇಕಾದ್ದು ಇನ್ನೂ ಬಹಳ ಇದೆ. ಅರಣ್ಯ ಇಲಾಖೆಗೆ ಅನುದಾನ ಕಡಿಮೆ ಇದ್ದಾಗ್ಯೂ ಕ್ಷೇತ್ರಗಳಿಗೆ ಅರಣ್ಯ ಇಲಾಖೆಯಿಂದ ತಲಾ ₹1 ಕೋಟಿ ರೂಪಾಯಿ ಅನುದಾನ ನೀಡಲಾಗುತ್ದಿದೆ. ಆದರೆ ಸಿಂದಗಿ ಕ್ಷೇತ್ರಕ್ಕೆ ₹2 ಕೋಟಿ ರೂಪಾಯಿ ಅನುದಾನ ಜೊತೆಗೆ ಆಲಮೇಲ ಪಟ್ಟಣದಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕಾಗಿ ₹1 ಕೋಟಿ ರೂಪಾಯಿ ಮಂಜೂರುಗೊಳಿಸಲಾಗಿದೆ. ಸಿಂದಗಿ ಪಟ್ಟಣಕ್ಕೂ ನನಗೂ ಅವಿನಾಭಾವ ಸಂಬಂಧ ಇದೆ, ಈ ಕ್ಷೇತ್ರ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಹೊಂದಲಿ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿಯ ಹೊನ್ನಪ್ಪಗೌಡ ಬಿರಾದಾರ ಬಡಾವಣೆಯಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ₹1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಾಲುಮರದ ತಿಮ್ಮಕ್ಕ ವೃಕ್ಷೊದ್ಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಸಿಂದಗಿ ಪಟ್ಟಣದಲ್ಲಿರುವ ಉದ್ಯಾನಗಳನ್ನು ಹಸಿರಾಗಿಸಲು ಈ ವರ್ಷವೇ 10 ಸಾವಿರ ಎತ್ತರದ ಸಸಿಗಳಿಗಾಗಿ ಅನುದಾನ ಮಂಜೂರು ಮಾಡುವೆ. ಸಿಂದಗಿ ಕ್ಷೇತ್ರದ ಬಗ್ಗೆ ನನಗೆ ಕಾಳಜಿ ಇದೆ. ಹೀಗಾಗಿ ಪೌರಾಡಳಿತ ಸಚಿವರನ್ನೊಳಗೊಂಡು ಉಳಿದ ಸಚಿವರಿಗೆ ಅನುದಾನ ನೀಡುವಂತೆ ಒತ್ತಾಯ ಪಡಿಸುವೆ ಎಂದು ಭರವಸೆ ನೀಡಿದರು.
ಪ್ರತಿಯೊಂದು ಕ್ಷೇತ್ರದ ಶಾಸಕರಿಗೆ ಸರ್ಕಾರ ಈಗಾಗಲೇ ₹25 ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದು, ಈಗ ಹೆಚ್ಚುವರಿಯಾಗಿ ಪ್ರತಿಯೊಂದು ಕ್ಷೇತ್ರಕ್ಕೆ ₹50 ಕೋಟಿ ರೂಪಾಯಿ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ.
ಅರಣ್ಯ ಇಲಾಖೆಯಿಂದ ಈಗಾಗಲೇ ಬೀದರ್‌ನಲ್ಲಿ ಮೂರು ಹಂತದಲ್ಲಿ 40 ಲಕ್ಷ ಗಿಡಗಳನ್ನು ನೆಡಲಾಗಿದೆ. ಯಾದಗಿರಿಯಲ್ಲಿ ಇಂದೇ 1ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರರಮಕ್ಕೆ ಚಾಲನೆ ನೀಡಿರುವೆ. ಈಗಾಗಲೇ ರಾಜ್ಯದಾದ್ಯಂತ 11.50 ಕೋಟಿ ಗಿಡಗಳನ್ನು ನೆಡಲಾಗಿದೆ ಎಂದು ವಿವರಿಸಿದರು.
ಅತೀ ಕಡಿಮೆ ಪ್ರತಿಶತ 5 ರಷ್ಟು ಅರಣ್ಯ ಹೊಂದಿದ ಕಲ್ಯಾಣ ಕರ್ನಾಟಕ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಕೋಟ್ಯಂತರ ಸಸಿ ನೆಡಬೇಕಿದೆ. ಕೃಷಿ ಜೊತೆ ಅರಣ್ಯ ಬೆಳೆಸಲು ರೈತರಿಗೆ ಪ್ರೊತ್ಸಾಹ ಧನ ನೀಡಲಾಗುತ್ತಿದೆ. ನೈಸರ್ಗಿಕ ಸಂಪತ್ತಿನ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಪರಿಸರ ಸಮತೋಲನಕ್ಕಾಗಿ ಗಿಡ, ಮರಗಳನ್ನು ಬೆಳೆಯಬೇಕು ಎಂದು ಸಚಿವರು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಮತಕ್ಷೇತ್ರದ 106 ಹಳ್ಳಿಗಳು, 16 ತಾಂಡಾಗಳ ಸಮಗ್ರ ಅಭಿವೃದ್ದಿ ಕನಸು ನನಸಾಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ಸಿಂದಗಿ ಪಟ್ಟಣದ ಉದ್ಯಾನಗಳ ಅಭಿವೃದ್ದಿಗಾಗಿ ₹5 ಕೋಟಿ ರೂಪಾಯಿ ಅನುದಾನ 10 ಸಾವಿರ ಸಸಿಗಳನ್ನು ಮಂಜೂರುಗೊಳಿಸುವಂತೆ ಸಚಿವರಿಗೆ ಕೇಳಿಕೊಂಡರು.
ಸಾರಂಗಮಠ-ಗಚ್ಚಿನಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.
ಬೆಳಗಾವಿ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ವಿಜಯಪುರ ವಿಭಾಗ ಉಪರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥನ ಕುಸನಾಳ, ಶಿಕ್ಷಕ ಸಿದ್ಧಲಿಂಗ ಚೌಧರಿ ಮಾತನಾಡಿದರು.
ಉದ್ಯಾನ ಬಡಾವಣೆಯ ಮಾಲಿಕ ದಯಾನಂದಗೌಡ ಬಿರಾದಾರ, ನಿರ್ಮಲಾ ಮಣೂರ ಹಾಗೂ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ರಾಜೀವ ಬಿರಾದಾರ ಒಳಗೊಂಡು ಇಲಾಖೆ ನೌಕರರನ್ನು ಗೌರವಿಸಲಾಯಿತು. ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಭಾಗ್ಯವಂತ ಮಸೂದಿ, ಅನಂತಕುಮಾರ ಪಾಕಿ, ಎಸ್.ಜಿ ಸಂಗಾಲಕ, ಇರಷಾದ ನೇವಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
2 ಎಕರೆ 36 ಗುಂಟೆ ಪ್ರದೇಶ, 450 ಪ್ಲಾಂಟ್‌ಗಳುವಾಕಿಂಗ್ ಟ್ರ್ಯಾಕ್, ಯೋಗ ವೇದಿಕೆ, ಮಕ್ಕಳ ಆಟಿಕೆಗಳು, ಜಿಮ್ ವ್ಯವಸ್ಥೆಎರಡು ಪರಗೋಲಗಳು, ಆರ್.ಒ ಕುಡಿಯುವ ನೀರಿನ ಪ್ಲ್ಯಾಂಟ್ ಸೋಲಾರ್ 2 ಸಿ.ಸಿ ಕ್ಯಾಮೆರಾಗಳು, ಪ್ರತ್ಯೇಕ ಶೌಚಾಲಯಗಳುಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ಪ್ರವೇಶ
ಸಿಂದಗಿಯಲ್ಲಿ 195 ಉದ್ಯಾನಗಳಿವೆ. ಇವುಗಳನ್ನು ಅಭಿವೃದ್ಧಿಪಡಿಸಲು ಪೌರಾಡಳಿತ ಇಲಾಖೆ ಸಚಿವರು ₹5₹10 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲುಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಒತ್ತಡ ಹೇರಬೇಕು ಅಶೋಕ ಮನಗೂಳಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.