ADVERTISEMENT

ವಿಜಯಪುರ: ಕೋವಿಡ್‌ನಿಂದ ಇಬ್ಬರು ಸಾವು 

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 14:27 IST
Last Updated 3 ಆಗಸ್ಟ್ 2020, 14:27 IST
   

ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ಕೋವಿಡ್‌ನಿಂದ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ ತಿಳಿಸಿದ್ದಾರೆ.

ದೇವರಗೆಣ್ಣೂರ ನಿವಾಸಿ ಕೋವಿಡ್ ಸೋಂಕಿತ 74 ವರ್ಷ ವಯೋಮಾನದ ವೃದ್ಧೆ (ಪಿ 105949) ಅಸ್ತಮಾ, ತೀವ್ರ ಉಸಿರಾಟದ ತೊಂದರೆ, ಜ್ವರದಿಂದ ಬಳಲುತ್ತಿದ್ದರು. ಜುಲೈ 27ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಆಗಸ್ಟ್‌ 2ರಂದು ಮೃತಪಟ್ಟಿದ್ದಾರೆ ಎಂದು ಹೇಳಿದರು.

ತಾಳಿಕೋಟಿ ನಿವಾಸಿ 70 ವರ್ಷ ವಯೋಮಾನದ ವೃದ್ಧ (ಪಿ119371) ತೀವ್ರ ಉಸಿರಾಟದ ತೊಂದರೆ, ತೀವ್ರರಕ್ತದೊತ್ತಡದಿಂದ ಬಳಲುತ್ತಿದ್ದರು. ಜುಲೈ 28ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸಿದೆ ಜುಲೈ 31ರಂದು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.