ADVERTISEMENT

ಯುಪಿಎಸ್‌ಸಿ | ವಿಜಯಪುರದ ಸವಿತಾ ಗೋಟ್ಯಾಳಗೆ 626ನೇ ರ‌್ಯಾಂಕ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 10:23 IST
Last Updated 4 ಆಗಸ್ಟ್ 2020, 10:23 IST
   

ವಿಜಯಪುರ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಜಯಪುರದ ಸವಿತಾ ಗೋಟ್ಯಾಳ 626ನೇ ರ‌್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಸವಿತಾ ಅವರ ಅಕ್ಕ ಅಶ್ವಿನಿ ಗೋಟ್ಯಾಳ ಈಗಾಗಲೇ ಐಪಿಎಸ್ ಅಧಿಕಾರಿಯಾಗಿದ್ದು, ಸದ್ಯ ಪಂಜಾಬಿನ ಲುಧಿಯಾನಾದಲ್ಲಿ ಎಡಿಜಿಪಿಯಾಗಿದ್ದಾರೆ. ಇನ್ನು ಇವರ ತಂದೆ ಸಿದ್ದಪ್ಪ ಗೋಟ್ಯಾಳ ಬಿ ಎಸ್ ಎನ್ ಎಲ್ ನಲ್ಲಿ ನೌಕರರಾಗಿದ್ದರು.

ಹಿರಿಯ ಮಗಳು ಐಪಿಎಸ್ ಅಧಿಕಾರಿಯಾಗುತ್ತಿದ್ದಂತೆ ಸ್ವಯಂ ನಿವೃತ್ತಿ ಪಡೆದಿದ್ದಾರೆ.ಹೆಣ್ಣು ಮಕ್ಕಳಿಬ್ಬರ ಸಾಧನೆಯಿಂದಗೋಟ್ಯಾಳ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.