ADVERTISEMENT

‘ಬದುಕಿನ ಸಮಸ್ಯೆಗಳಿಗೆ ವಚನಗಳಲ್ಲಿದೆ ಉತ್ತರ’

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 6:06 IST
Last Updated 7 ಆಗಸ್ಟ್ 2025, 6:06 IST
ತಾಳಿಕೋಟೆ ಪಟ್ಟಣದ ಕಾಳಿಕಾದೇವಿ  ದೇವಸ್ಥಾನದಲ್ಲಿ ಸ್ಥಳೀಯ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆಯ ವತಿಯಿಂದ ಶ್ರಾವಣ ಮಾಸದ ಅಂಗವಾಗಿ   ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಜೆ.ಎಸ್.ಜಿ. ಪಿಯು ಕಾಲೇಜಿನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಸೋಮವಾರ ಮಾತನಾಡಿದರು.
ತಾಳಿಕೋಟೆ ಪಟ್ಟಣದ ಕಾಳಿಕಾದೇವಿ  ದೇವಸ್ಥಾನದಲ್ಲಿ ಸ್ಥಳೀಯ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆಯ ವತಿಯಿಂದ ಶ್ರಾವಣ ಮಾಸದ ಅಂಗವಾಗಿ   ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಜೆ.ಎಸ್.ಜಿ. ಪಿಯು ಕಾಲೇಜಿನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಸೋಮವಾರ ಮಾತನಾಡಿದರು.   

ತಾಳಿಕೋಟೆ: ವಚನಗಳ ಅಧ್ಯಯನದಿಂದ ಬದುಕಿನ ಎಲ್ಲ ಸಮಸ್ಯೆಗಳಿಗೆ ಉತ್ತರ ದೊರೆಯುತ್ತದೆ ಎಂದು ಜೆ.ಎಸ್.ಜಿ. ಪಿಯು ಕಾಲೇಜಿನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ನುಡಿದರು.

ಅವರು ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಸ್ಥಳೀಯ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆಯ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಶರಣರು ಕೊಟ್ಟಿದ್ದು ಕಾಯಕ, ದಾಸೋಹ ಹಾಗೂ ಸಾಮರಸ್ಯ ಎಂಬ ತತ್ವಗಳನ್ನು. ಅವರು ಮನಶ್ಶುದ್ಧಿಯಿಂದ ಕಾಯಕ ಮಾಡಿ ಬಂದ ಧನದಲ್ಲಿ ಹಸಿದವನಿಗೆ ಅನ್ನವಿಕ್ಕುವುದು ಅಲ್ಲದೆ ಎಲ್ಲ ವರ್ಗದ ಜನರನ್ನು ಒಂದೆಡೆ ಕೂಡಿಸಿ ಸಾಮಾಜಿಕ ಸಾಮರಸ್ಯವನ್ನುಂಟು ಮಾಡಿದರು. ಆದರೆ ಇಂದು ಸತ್ಯಶುದ್ಧ ಮನಸ್ಸಿನವರ ಕೊರತೆ ಇದೆ ಎಂದು ವಿಷಾದಿಸಿದರು.

ADVERTISEMENT

ಎಸ್.ಕೆ.ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಶೇಷಾಚಲ ಹವಾಲ್ದಾರ(ಚೇಚಿ) ಮಾತನಾಡಿದರು. ಸುಶ್ರಾವ್ಯವಾಗಿ ವಚನಗಾಯನವನ್ನೂ ಮಾಡಿದರು. ಶರಣಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಹಂಚಲಿ ಅಧ್ಯಕ್ಷತೆ ವಹಿಸಿದ್ದರು.

ಔಷಧ ವ್ಯಾಪಾರಿ ಸುಭಾಶ್ಚಂದ್ರ ಸಾಲಂಕಿ, ಪೀರಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಆರ್.ಬಿ.ದಮ್ಮೂರಮಠ, ಗಣ್ಯ ವರ್ತಕರಾದ ಖಾಜಾಹುಸೇನ ಮುಲ್ಲಾ, ಮಹಾದೇವಪ್ಪ ಕುಂಬಾರ ವೇದಿಕೆಯಲ್ಲಿದ್ದರು. ಜಯಶ್ರೀ ಸಜ್ಜನ ಪ್ರಾರ್ಥಿಸಿದರು. ಗುಂಡುರಾವ್ ಧನಪಾಲ ಸ್ವಾಗತಿಸಿದರು. ಸಿದ್ದು ಕರಡಿ ನಿರ್ವಹಿಸಿದರು. ಕಾಶಿನಾಥ ಸಜ್ಜನ ವಂದಿಸಿದರು.

ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆಯ ಸದಸ್ಯರು, ಪದಾಧಿಕಾರಿಗಳು ಪಟ್ಟಣದ ಶರಣಶರಣೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.