ವಿಜಯಪುರ: ಹವಾಮಾನ ವೈಫರಿತ್ಯದ ಪರಿಣಾಮ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಶನಿವಾರ ದಿನಪೂರ್ತಿ ಸುರಿದ ತುಂತುರು ಮಳೆ ಹಾಗೂ ಮರಗಟ್ಟುವ ಚಳಿಗೆ ಜನ ಬೆಚ್ಚಿ ಬಿದ್ದಿದ್ದಾರೆ.
ಆಗಸದಲ್ಲಿ ದಟ್ಟೈಸಿದ ಕರಿಮೋಡಗಳುದಿನಪೂರ್ತಿ ಸೂರ್ಯನ ದರ್ಶನಕ್ಕೆ ಅವಕಾಶ ನೀಡಲಿಲ್ಲ.ಶೀತ ಗಾಳಿ ಬೀಸುತ್ತಿದ್ದು, ಮೈನಡುಗಿಸುತ್ತಿದೆ. ಬಿಸಿಲ ನಾಡಲ್ಲಿ ತಂಪಾದ ವಾತಾವರಣವು ಜನರನ್ನು ಮನೆಯಲ್ಲೇ ದಿನಪೂರ್ತಿ ಕೂಡಿಹಾಕಿತ್ತು.
ಇಳಿಯನ್ನು ತಬ್ಬಿದ್ದ ದಟ್ಟ ಮಂಜು, ಮೋಡದ ನಡುವೆ ವಾಹನ ಸವಾರರು ದೀಪ ಬೆಳಗಿಸಿಕೊಂಡು ಚಲಿಸುತ್ತಿದ್ದ ದೃಶ್ಯ ಕಂಡುಬಂದಿತು.
ವಿವಿಧೆಡೆ ಮಳೆ:
ಬಸವನ ಬಾಗೇವಾಡಿಯಲ್ಲಿ 4.2 ಮಿ.ಮೀ.ಮಳೆಯಾಗಿದೆ. ಉಳಿದಂತೆಆಲಮಟ್ಟಿ 5,
ಅರೇಶಂಕರ 4.2, ವಿಜಯಪುರ 2.2, ಹಿಟ್ನಳ್ಳಿ 2.2, ಮಮದಾಪೂರ 4.2, ಇಂಡಿ 1, ನಾದ ಬಿ. ಕೆ. 2, ಮುದ್ದೆಬಿಹಾಳ 5.5, ನಾಲತವಾಡ 2.4, ಢವಳಗಿ 6, ಸಿಂದಗಿ 3, ಆಲಮೇಲ 2, ಸಾಸಾಬಾಳ 1.5, ರಾಮನಹಳ್ಳಿ 2.6 ಮಿ.ಮೀ.ಮಳೆಯಾದ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.