ವಿಜಯಪುರ: ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಪಿಡಿಒ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.ನಗರದ ಹೊರವಲಯದಲ್ಲಿ ನಿನ್ನೆ ತಡರಾತ್ರಿ ಲಾರಿ ಡಿಕ್ಕಿಯಾಗಿ ಪಿಡಿಒ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.
ರೇಡಿಯೋ ಕೇಂದ್ರದ ಬಳಿ ಈ ಘಟನೆ ನಡೆದಿದೆ.ಬೈಕಿನಲ್ಲಿದ್ದ ನವೀನಕುಮಾರ ಅಶೋಕ ಗೋಪಶೆಟ್ಟಿ(31) ಸಾವಿಗೀಡಾದ ಪಿಡಿಒ ಆಗಿದ್ದಾರೆ.ವಿಜಯಪುರ ನಗರದ ಗಣೇಶ ನಗರ ನಿವಾಸಿಯಾಗಿದ್ದ ಪಿಡಿಒವಿಜಯಪುರ ತಾಲ್ಲೂಕು ಪಂಚಾಯಿತಿಯಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮತ್ತೊಂದುಪ್ರಕರಣದಲ್ಲಿ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಗೆ ಬೈಕ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.ವಿಜಯಪುರ ಜಿಲ್ಲಾಸ್ಪತ್ರೆ ಬಳಿ ಈ ಘಟನೆ ನಡೆದಿದೆ.ಶಿವಲೀಲಾ ಮಲ್ಲಿಕಾರ್ಜುನ ಬಿಜಾಪುರ(50) ಸಾವಿಗೀಡಾದ ಮಹಿಳೆಯಾಗಿದ್ದಾರೆ.ಬೈಕ್ ಸವಾರನಿಗೂ ಗಾಯವಾಗಿದ್ದು,ಅಲ್ ಅಮೀನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.