ಆಲಮಟ್ಟಿ: ಸಮೀಪದ ಮಜರೇಕೊಪ್ಪ ಗ್ರಾಮದಲ್ಲಿ ಚಿನವಾಲಕೊಪ್ಪದ ದಾಳಮ್ಮದೇವಿಯ ಜಾತ್ರಾ ಮಹೋತ್ಸವ ಮೇ 13 ರಿಂದ ಆರಂಭಗೊಂಡಿದ್ದು, ಮೂರು ದಿನಗಳ ಕಾಲ ಜರುಗಲಿದೆ.
ಮೇ 14ರಂದು ಬೆಳಿಗ್ಗೆ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಲಿದೆ. 10 ಗಂಟೆಗೆ ಗೊಂಬೆಯ ಕುಣಿತ ಪ್ರದರ್ಶನ ನಡೆಯಲಿದೆ.
ರಾತ್ರಿ 10.30ಕ್ಕೆ ನಾಟಕ ಜರುಗಲಿದ್ದು, ನಾನಾ ಮುಖಂಡರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮೇ 15ರಂದು ಎತ್ತಿನಗಾಡಿ ಓಟದ ಸ್ಪರ್ಧೆ, ಹಾಲು ಹಲ್ಲು ಮತ್ತು ನಾಲ್ಕು ಹಲ್ಲಿನ ಟಗರಿನ ಕಾಳಗ ಜರುಗುವುದು. ಈ ಕಾರ್ಯಕ್ರಮವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಲಿದ್ದಾರೆ ಎಂದು ಜಾತ್ರಾ ಕಮಿಟಿಯ ಮುಖ್ಯಸ್ಥ ಪರಶುರಾಮ ಕೊಳಮಲಿ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.