ಆಲಮಟ್ಟಿ: ಮಂಗಳವಾರ ಮಧ್ಯಾಹ್ನ ಬೀಸಿದ ರಭಸದ ಗಾಳಿಗೆ ವಿದ್ಯುತ್ ಗೋಪುರ, ವಿದ್ಯುತ್ ಕಂಬ ಉರುಳಿದ್ದು, ನಾನಾ ಕಡೆ ಹೊಲದಲ್ಲಿನ ತಗಡಿನ ಶೆಡ್ ಗಳು ಹಾರಿಹೋಗಿವೆ. ಬೇನಾಳ ಬಳಿ ಹೊಲದಲ್ಲಿ ಅಳವಡಿಸಿದ್ದ ಪವರ ಗ್ರಿಡ್ ವಿದ್ಯುತ್ ಕಂಪನಿ ಅಳವಡಿಸಿದ್ದ 440 ಕೆವಿ ವಿದ್ಯುತ್ ಕಂಬವೊಂದು ಉರುಳಿ ಬಿದ್ದಿವೆ.
ಬೇನಾಳ ಆರ್.ಎಸ್, ಬೇನಾಳ ಎನ್.ಎಚ್, ಗೋನಾಳ, ವಂದಾಲ, ದೇವಲಾಪುರ ಹೀಗೆ ನಾನಾ ಕಡೆ ಮನೆಗೆ ವಿದ್ಯುತ್ ಕಲ್ಪಿಸುವ ವಿದ್ಯುತ್ ಕಂಬಗಳು ಬಿದ್ದಿವೆ.
ಇವೇ ಗ್ರಾಮಗಳಲ್ಲಿ ಹೊಲದಲ್ಲಿ ಹಾಕಿದ್ದ ಬಹುತೇಕ ರೈತರ ತಗಡಿನ ಶೆಡ್ ಗಳು ರಭಸದ ಗಾಳಿ ಹಾರಿ ಹೋಗಿವೆ. ಮಳೆಯ ಪ್ರಮಾಣ ಕಡಿಮೆಯಿದ್ದು, ಗಾಳಿ ಆರ್ಭಟ ಹೆಚ್ಚಿದೆ.
ಹಾರಿಹೋದ ಶೆಡ್ ನ ತಗಡುಗಳನ್ನು ಹುಡುಕಾಟದಲ್ಲಿ ರೈತರು ತೊಡಗಿದ್ದರು.
ಇವೇ ಗ್ರಾಮಗಳಲ್ಲಿ 50 ಕ್ಕೂ ಅಧಿಕ ಗಿಡಗಳು ಬೇರು ಸಮೇತ ಉರುಳಿವೆ. ಕೆಲವೊಂದು ಗಿಡಗಳು ಟೊಂಗೆಗಳು ಮುರಿದಿವೆ. ಕೆಲವು ಕಡೆ ಟೊಂಗೆಗಳು ಮನೆಯ ಮೇಲೆಯೂ ಬಿದ್ದಿವೆ. ಭಾರಿ ಗಾಳಿ ತೋಟದಲ್ಲಿನ ಕಬ್ಬು, ಕಟಾವಿಗೆ ಬಂದಿದ್ದ ಸೂರ್ಯಕಾಂತಿ ಬೆಳೆ ಸಂಪೂರ್ಣ ಬಾಗಿ ಹಾನಿಯಾಗಿವೆ. ಯಾವುದೇ ಪ್ರಾಣಾಪಾಯ, ಗಾಯ ಆಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.