ಸಾಂದರ್ಭಿಕ ಚಿತ್ರ
ಕೊಲ್ಹಾರ: ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೈದಾನದಲ್ಲಿ ಅ.31 ರಂದು ಬೆಳಿಗ್ಗೆ 9.30ಕ್ಕೆ 2025-26ನೇ ಸಾಲಿನ ಕೊಲ್ಹಾರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವನ ಬಾಗೇವಾಡಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್ ಅವಟಿ ತಿಳಿಸಿದ್ದಾರೆ.
ಈ ಬಾರಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಪುರುಷ ಹಾಗೂ ಮಹಿಳೆಯರು ದಸರಾಸಿಎಂ ಕಪ್ ಕ್ಯೂ ಆರ್ ಕೋಡ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕಡ್ಡಾಯವಾಗಿ ತಾವು ಭಾಗವಹಿಸುವ ಕ್ರೀಡೆಗಳನ್ನು ನೋಂದಣಿ ಮಾಡಿಕೊಂಡು ನೋಂದಣಿ ಅರ್ಜಿಯೊಂದಿಗೆ ಭಾಗವಹಿಸುವುದು ಕಡ್ಡಾಯ. ಇದರ ಜೊತೆಗೆ ಸರ್ಕಾರದಿಂದ ಅಧಿಕೃತವಿರುವ ಯಾವುದಾದರೂ ಒಂದು ಗುರುತಿನ ಚೀಟಿ ಹಾಗೂ ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ತರಬೇಕು.
ಪುರುಷ ಹಾಗೂ ಮಹಿಳೆಯರಿಗಾಗಿ ಓಟ, ಜಿಗಿತ, ಎಸೆತ, ರಿಲೇ, ಕೊಕ್ಕೊ, ಕಬಡ್ಡಿ, ವಾಲಿಬಾಲ್, ಥ್ರೋ ಬಾಲ್, ಪುಟ್ಬಾಲ್, ಯೋಗಾಸನ, ಈಜು ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಮಾಹಿತಿಗಾಗಿ ಸಹಾಯಕ ಕ್ರೀಡಾಧಿಕಾರಿ ಮೊ. 9663297654 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.