ADVERTISEMENT

ವಿಜಯಪುರ: ಸಿಡಿಲಿಗೆ ಒಂದು ಎಮ್ಮೆ, ಎರಡು ಎತ್ತು ಸಾವು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 13:47 IST
Last Updated 25 ಏಪ್ರಿಲ್ 2025, 13:47 IST
<div class="paragraphs"><p>ಸಿಡಿಲು (ಸಾಂದರ್ಭಿಕ ಚಿತ್ರ )</p></div>

ಸಿಡಿಲು (ಸಾಂದರ್ಭಿಕ ಚಿತ್ರ )

   

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ, ತಾಳಿಕೋಟೆ, ಮನಗೂಳಿ ವ್ಯಾಪ್ತಿಯಲ್ಲಿ ಶುಕ್ರವಾರ ಗುಡುಗು, ಸಿಡಿಲಿನೊಂದಿಗೆ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ವಿಜಯಪುರ ನಗರದಲ್ಲೂ ಗುಡುಗು, ಸಿಡಿಲಿನೊಂದಿಗೆ ತುಂತುರು ಮಳೆಯಾಗಿದೆ.

ಬಸವನಬಾಗೇವಾಡಿ ತಾಲ್ಲೂಕಿನ ತಾಲ್ಲೂಕಿನ ಕರಭಂಟನಾಳ ಗ್ರಾಮದಲ್ಲಿ ಸಿಡಿಲು ಬಡಿದು ಬಸವರಾಜ ಸದಾಶಿವ ಮಣ್ಣೂರ ಅವರ ಒಂದು ಎಮ್ಮೆ ಹಾಗೂ ನಾಗೂರು ಗ್ರಾಮದಲ್ಲಿ ಬಸಪ್ಪ ಮಲಕಪ್ಪ ಕ್ವಾಟಿ ಅವರ ಎತ್ತು ಸಾವನ್ನಪ್ಪಿವೆ.

ADVERTISEMENT

ಬಸವನಬಾಗೇಡಿ ಪಟ್ಟಣದ ಮಹಮ್ಮದ ಹುಸೇನ್ ಮಕ್ತುಮಸಾಬ ಹೋಕ್ರಾಣಿ ಮನೆಗೆ ಸಿಡಿಲು ಬಡಿದಿದ್ದು, ಜೀವ ಹಾನಿ ಆಗಿಲ್ಲ.

ದೇವರಹಿಪ್ಪರಗಿ ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಪ್ರಭುಗೌಡ ನಂದಪ್ಪ ದೇವರಗುಡಿ ಅವರಿಗೆ ಸೇರಿದ ಎತ್ತು ಸಿಡಿಲು ಬಡಿದು ಗುರುವಾರ ಸಂಜೆ ಸಾವಿಗೀಡಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.