
ವಿಜಯಪುರ ನಗರದ ಮುದನೂರ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಐನಾಪೂರ ತಾಂಡಾದಲ್ಲಿ ಗುರುವಾರ ನಡೆದ ಉಚಿತ ಆರೋಗ್ಯ ಶಿಬಿರಕ್ಕೆ ಡಾ.ಎಸ್.ಆರ್. ಮುದನೂರ ಚಾಲನೆ ನೀಡಿದರು
ವಿಜಯಪುರ: ನಗರದ ಮುದನೂರ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಐನಾಪೂರ ತಾಂಡಾದಲ್ಲಿ ಗುರುವಾರ ಉಚಿತ ಆರೋಗ್ಯ ಶಿಬಿರ ಯಶಸ್ವಿ ನಡೆಯಿತು.
ಮುದನೂರ ಆಸ್ಪತ್ರೆಯ ವೈದ್ಯ ಡಾ.ಎಸ್.ಆರ್. ಮುದನೂರ ಅವರು ಶಿಬಿರಕ್ಕೆ ಚಾಲನೆ ನೀಡಿ ಆರೋಗ್ಯದ ಕುರಿತು ಅರಿವು ಮೂಡಿಸಿದರು.
ಡಾ. ಸಿದ್ದನಗೌಡ ಆರ್. ಮುದನೂರ ಅವರು ಹೆಣ್ಣುಮಕ್ಕಳ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿ, ಅದಕ್ಕಿರುವ ಲಸಿಕೆ ಮತ್ತು ಬಂಜೆತನ ನಿವಾರಣೆ ಕುರಿತು ಜಾಗೃತಿ ಮೂಡಿಸಿದರು.
ಶಿಬಿರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಯಿತು.
ಈ ಶಿಬಿರದಲ್ಲಿ ಧರ್ಮಸ್ಥಳ ಟ್ರಸ್ಟ್ ನ ತಾಲ್ಲೂಕು ಸಮನ್ವಯಾಧಿಕಾರಿ ಪ್ರೀತಿ ಗಡ್ಡಿಹಳ್ಳಿ, ಬಂಜಾರಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸವಿತಾ, ಹೆಲ್ತ್ ಇಂಡಿಯಾದ ಜಿಲ್ಲಾ ಸಂಯೋಜಕ ಮಳಸಿದ್ದ ಮದರಿ ಹಾಗೂ ಮುದನೂರ ಆಸ್ಪತ್ರೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.