
ಜೈಲು (ಪ್ರಾತಿನಿಧಿಕ ಚಿತ್ರ)
ವಿಜಯಪುರ: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸೆಷನ್ಸ್ ಕೋರ್ಟ್ ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ದೇವರಹಿಪ್ಪರಗಿ ತಾಲ್ಲೂಕಿನ ಕೊರವಾರ ಗ್ರಾಮದಲ್ಲಿ ಮನೆ ಎದುರಿನ ಖುಲ್ಲಾ ಜಾಗಕ್ಕಾಗಿ ದಾಯಾದಿಗಳ ನಡುವೆ ನಡೆದ ಗಲಾಟೆಯಲ್ಲಿ ಭೀಮನಗೌಡ ಪಾಟೀಲ ಎಂಬುವವರನ್ನು 2013ರ ನವೆಂಬರ್ 9ರಂದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಶೇಖರ ಪಾಟೀಲ ಹಾಗೂ ಆತನ ಮಕ್ಕಳಾದ ವೀರನಗೌಡ ಪಾಟೀಲ, ಆನಂದ ಗೌಡ ಪಾಟೀಲ ಹಾಗೂ ಕೊಲೆಗೆ ಸಹಕರಿಸಿದ ಹುಣಸಗಿಯ ಚಂದ್ರಶೇಖರ ಕುಂಬಾರ, ಶರಣಬಸು ಸೇವಟಿ, ಮಲ್ಲಿಕಾರ್ಜುನ ಅಂಗಡಿ ಮತ್ತು ಬಸವರಾಜ ಯಾಳಗಿ ಅವರಿಗೆ ಡಿಸೆಂಬರ್ 1ರಂದು ಕೋರ್ಟ್ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ವಿ.ಜಿ.ಹಗರಗೊಂಡ ವಾದ ಮಂಡಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.