
ವಿಜಯಪುರ: ವಿಜಯಪುರ ನಗರ, ಸಿಂದಗಿ, ಮುದ್ದೇಬಿಹಾಳ, ಚಡಚಣ, ಇಂಡಿ, ತಾಳಿಕೋಟೆ, ಬಸವನ ಬಾಗೇವಾಡಿ ಸೇರಿದಂತೆ ಜಿಲ್ಲೆಯಾದ್ಯಂತ ಹೊಸ ವರ್ಷ 2026 ಅನ್ನು ಚುಮುಚುಮು ಚಳಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.
2025ರ ಸಿಹಿ–ಕಹಿ ಘಟನೆಗಳಿಗೆ ವಿದಾಯ ಹೇಳಿ, 2026ರ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಡಿಜೆ, ಸಂಗೀತ ಕಾರ್ಯಕ್ರಮಗಳನ್ನು ವಿವಿಧೆಡೆ ಆಯೋಜಿಸಲಾಗಿತ್ತು.
ವರ್ಷದ ಕಡೆಯ ದಿನವಾಗಿದ್ದ ಬುಧವಾರ ಬೇಕರಿ, ವೈನ್‌ಶಾಪ್, ಮಾಂಸದ ಅಂಗಡಿಗಳಲ್ಲಿ ವ್ಯಾಪಾರ, ವಹಿವಾಟು ಜೋರಾಗಿತ್ತು.
ಹೋಟೆಲ್, ಬಾರ್, ರೆಸ್ಟೋರೆಂಟ್‌ಗಳಲ್ಲೂ ಹೊಸ ವರ್ಷದ ಪಾರ್ಟಿಗಳು ನಡೆದವು. ನಗರ, ಪಟ್ಟಣಗಳ ರಸ್ತೆಗಳ ಮೇಲೆ ಸಂಭ್ರಮ ಕಂಡುಬಂದಿತು. ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗುವ ಮೂಲಕ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದ್ದರು.
ಆಪ್ತರು, ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಕೇಕ್ ಕತ್ತರಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಗೆಬಗೆಯ ಭಕ್ಷ್ಯ, ಭೋಜನವನ್ನು ಮನೆಯಲ್ಲಿ ತಯಾರಿಸಿ ಸವಿದರು. ಇನ್ನು ಕೆಲವರು ನಗರ, ಪಟ್ಟಣದ ಹೊರವಲಯದಲ್ಲಿ ಇರುವ ಹೊಲ, ತೋಟದ ಮನೆಗಳಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಸಂಭ್ರಮಿಸಿದರು. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ನೇಹಿತರೊಡಗೂಡಿ ಹೊಸ ವರ್ಷವನ್ನು ಸ್ವಾಗತಿಸಿದರು.
ಫೇಸ್‌ಬುಕ್, ವಾಟ್ಸ್ ಆ್ಯಪ್‌ಗಳಲ್ಲಿ ಶುಭಾಶಯಗಳ ವಿನಿಮಯ ಜೋರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.