ADVERTISEMENT

ವಿಜಯಪುರ: ಹೊರಗುತ್ತಿಗೆ ನೌಕರ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 12:42 IST
Last Updated 23 ಜೂನ್ 2022, 12:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಹೋಟೆಲ್ ಪರವಾನಗಿ ನವೀಕರಿಸಲು ₹2 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹೊರಗುತ್ತಿಗೆ ನೌಕರ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಬಲೆಗೆ ಬಿದ್ದಿದ್ದಾನೆ.

ಇಲ್ಲಿನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕೇಸ್ ವರ್ಕರ್ ಕಿರಣಕುಮಾರ ಡಂಗೆ ಎಸಿಬಿ ಬಲೆಗೆ ಬಿದ್ದ ಹೊರಗುತ್ತಿಗೆ ಸಿಬ್ಬಂದಿ.

ಹೋಟೆಲ್ ಪರವಾನಗಿಯನ್ನು ನವೀಕರಿಸಲು ₹ 2 ಸಾವಿರ ಬೇಡಿಕೆ ಇರಿಸಿದ್ದ ಕಿರಣಕುಮಾರ ಆ ಮೊತ್ತ ಸ್ವೀಕರಿಸುವಾಗ ಸಾಕ್ಷಿ ಸಹಿತ ಸಿಕ್ಕಿ ಬಿದ್ದಿದ್ದಾನೆ.

ADVERTISEMENT

ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ಮಂಜುನಾಥ ಗಂಗಲ್‌ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಪರಮೇಶ್ವರ ಜಿ.ಕವಟಗಿ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.