
ಪ್ರಜಾವಾಣಿ ವಾರ್ತೆವಿಜಯಪುರ: ನಗರದ ಆಸಾರ್ ಮಹಾಲ್ ಬಳಿ ಇರುವ ‘ಪುಷ್ಕರಣಿ’ಯಲ್ಲಿ ಮಂಗಳವಾರ ಮುಳುಗಿ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ.
ಮೃತ ಬಾಲಕನನ್ನು ಲೊಹಾರಗಲ್ಲಿ ನಿವಾಸಿ ಪ್ರೀತಂ ಪವಾರ (10) ಎಂದು ಗುರುತಿಸಲಾಗಿದೆ. ಪುಷ್ಕರಣಿ ಬಳಿ ಬಾಲಕ ಆಟವಾಡುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದಿದ್ದಾನೆ. ವಿಷಯ ತಿಳಿದ ಸ್ಥಳೀಯ ಯುವಕರು ಸೇರಿ ಬಾಲಕನ್ನು ನೀರಿನಿಂದ ಮೇಲಕೆತ್ತಿ, ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯದಲ್ಲಿ ಬಾಲಕ ಅಸುನೀಗಿದ್ದಾನೆ.
ಆಸಾರ್ ಮಹಲ್ ಪುಷ್ಕರಣಿ ಸುತ್ತಲೂ ತಂತಿ ಬೇಲಿ ಹಾಕುವಂತೆ ಸ್ಥಳೀಯರು ಹಲವಾರು ಬಾರಿ ಮನವಿ ಮಾಡಿದ್ದರೂ ನಿರ್ಲಕ್ಷ್ಯ ತೋರಲಾಗಿದೆ. ಇದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದರು.
ಗೋಳಗುಮ್ಮಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.