ADVERTISEMENT

ಗ್ರಾಮ ಲೆಕ್ಕಾಧಿಕಾರಿ ಅಮಾನತು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 9:44 IST
Last Updated 22 ಫೆಬ್ರುವರಿ 2020, 9:44 IST

ವಿಜಯಪುರ: ಮೇವು ಕೇಂದ್ರಗಳಲ್ಲಿ ವಿತರಣೆ ಮಾಡಿ, ಸ್ವೀಕೃತವಾದ ಮೊತ್ತವನ್ನು ಸರ್ಕಾರಕ್ಕೆ ಪಾವತಿಸದೆ ಕರ್ತವ್ಯ ಲೋಪವೆಸಗಿದ್ದ ಚಡಚಣ ತಾಲ್ಲೂಕು ಇಂಚಗೇರಿ ಗ್ರಾಮ ಲೆಕ್ಕಾಧಿಕಾರಿ ಎ.ಆರ್.ಘಂಟಿ ಅವರನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಗುರುವಾರ ಅಮಾನತಗೊಳಿಸಿದ್ದಾರೆ.

ಬರಗಾಲ ಸಮಯದಲ್ಲಿ ಇಂಚಗೇರಿ, ಶಿರಾಡೋಣ, ರೇವತಗಾಂವ ಗ್ರಾಮಗಳಲ್ಲಿ ತೆರೆಯಲಾದ ಮೇವು ಬ್ಯಾಂಕ್‌ಗಳಲ್ಲಿ ಪ್ರತಿ ಕೆ.ಜಿಗೆ ₹2ರಂತೆ ಸ್ವೀಕರಿಸಿದ್ದ ಹಣವನ್ನು ಇವರು ಸರ್ಕಾರಕ್ಕೆ ಪಾವತಿಸಿರಲಿಲ್ಲ. ಚಲನ್‌ಗಳ ನೈಜತೆ ಕುರಿತು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಚಲನ್‌ಗಳಲ್ಲಿರುವ ಸಹಿ ಮತ್ತು ಮೊಹರು ಬ್ಯಾಂಕಿನದ್ದಲ್ಲ ಎಂದು ಬ್ಯಾಂಕ್‌ ಅಧಿಕಾರಿಗಳು ದೃಢಪಡಿಸಿದ್ದಾರೆ. ಹಣ ದುರುಪಯೋಗ ಹಾಗೂ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿರುವುದು ಮೆಲ್ನೋಟಕ್ಕೆ ಕಂಡು ಬಂದ ಕಾರಣ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT