ADVERTISEMENT

ವಿಜಯ‍ಪುರ: ವೃಕ್ಷಥಾನ್‌ಗೆ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹ!

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಆದೇಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 5:14 IST
Last Updated 21 ಸೆಪ್ಟೆಂಬರ್ 2025, 5:14 IST
ವೃಕ್ಷಥಾನ್‌ ಹೆರಿಟೇಜ್‌ ರನ್‌ ಲೋಗೊ 
ವೃಕ್ಷಥಾನ್‌ ಹೆರಿಟೇಜ್‌ ರನ್‌ ಲೋಗೊ    

ವಿಜಯ‍ಪುರ: ಡಿಸೆಂಬರ್‌ನಲ್ಲಿ ನಡೆಯಲಿರುವ ‘ವೃಕ್ಷಥಾನ್‌ ಹೆರಿಟೇಜ್‌ ರನ್‌’ ಸಂಬಂಧ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ನೋಂದಣಿ ಶುಲ್ಕ ಸಂಗ್ರಹಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ  ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಿರುವುದು ವಿರೋಧಕ್ಕೆ ಕಾರಣವಾಗಿದೆ.

‘ಪ್ರಥಮ ಹಾಗೂ ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಮಾಡಿಕೊಳ್ಳುವ ಸಂದರ್ಭದಲ್ಲೇ ವಿದ್ಯಾರ್ಥಿಗಳಿಂದ ವೃಕ್ಷತ್ಥಾನ್‌ ಹೆರಿಟೇಜ್‌ ರನ್‌ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಿಕೊಳ್ಳಲು ಪ್ರತಿಯೊಬ್ಬರ ವಿದ್ಯಾರ್ಥಿಯಿಂದ ₹500 ಪಡೆದು ‘ವೃಕ್ಷ ಅಭಿಯಾನ ಪ್ರತಿಷ್ಠಾನ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಕೌಂಟ್‌ ನಂ. 36506394652ಕ್ಕೆ ಸೆಪ್ಟೆಂಬರ್‌ 22ರ ಒಳಗಾಗಿ ವಿಳಂಬ ಮಾಡದೇ ಭರಣಾ ಮಾಡಬೇಕು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚಿಸಿದ್ದಾರೆ.  

ವಿಜಯಪುರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಪದವಿ ಪೂರ್ವ ಕಾಲೇಜು, ಎಸ್‌.ಎಸ್‌. ಪದವಿ ಪೂರ್ವ ಕಾಲೇಜು, ಎಸ್‌.ಬಿ. ಕಲಾ ಮತ್ತು ಕೆಸಿಪಿ ವಿಜ್ಞಾನ ಪದವಿ ಪೂರ್ವ ಕಾಲೇಜು, ವಿ.ಭ. ದರಬಾರ ಪದವಿ ಪೂರ್ವ ಕಾಲೇಜು, ಸಿಕ್ಯಾಬ್‌ ಬಾಲಕರ ಪದವಿ ಪೂರ್ವ ಕಾಲೇಜು, ಅಂಜುಮನ್‌ ಬಾಲಕರ ಪದವಿ ಪೂರ್ವ ಕಾಲೇಜು, ಕಾಳಿದಾಸ ಪದವಿ ಪೂರ್ವ ಕಾಲೇಜು, ಎಸ್‌.ಜೆ.ಬಿ.ಪದವಿ ಪೂರ್ವ ಕಾಲೇಜು, ಬಸವೇಶ್ವರ ಪದವಿ ಪೂರ್ವ ಕಾಲೇಜು, ಬಂಜಾರ ಪದವಿ ಪೂರ್ವ ಕಾಲೇಜು, ಬಿ.ಡಿ.ಇ ಬಾಲಕಿಯರ ಪದವಿ ಪೂರ್ವ ಕಾಲೇಜು, ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜು, ಶಾಂತಿನಿಕೇತನ ಪದವಿ ಪೂರ್ವ ಕಾಲೇಜು, ಚೇತನ ಪದವಿ ಪೂರ್ವ ಕಾಲೇಜು, ಬೆನಕಟ್ಟೆ ಪದವಿ ಪೂರ್ವ ಕಾಲೇಜು, ಏಕ್ಸಫರ್ಟ್‌ ಪದವಿ ಪೂರ್ವ ಕಾಲೇಜು, ಶಾಹೀನ್‌ ಪದವಿ ಪೂರ್ವ ಕಾಲೇಜು, ಆರ್‌.ಕೆ.ಎಂ.ಪದವಿ ಪೂರ್ವ ಕಾಲೇಜು, ರೂಪದೇವಿ ಪದವಿ ಪೂರ್ವ ಕಾಲೇಜು, ಗ್ಲೋಬಲ್‌ ವಿಜ್ಞಾನ ಪದವಿ ಪೂರ್ವ ಕಾಲೇಜು, ತುಂಗಳ ವಿಜ್ಞಾನ ಪದವಿ ಪೂರ್ವ ಕಾಲೇಜು, ಸೇಂಟ್‌ ಜೋಸೇಪ್‌ ಪದವಿ ಪೂರ್ವ ಕಾಲೇಜು, ಲೊಯೊಲಾ ಪದವಿ ಪೂರ್ವ ಕಾಲೇಜು, ನಾಗರಬೆಟ್ಟ ಆಕ್ಸಫರ್ಡ್‌ ವಿಜ್ಞಾನ ಪದವಿ ಪೂರ್ವ ಕಾಲೇಜು, ಬಬಲೇಶ್ವರದ ಎಸ್‌.ಎಸ್‌.ಪದವಿ ಪೂರ್ವ ಕಾಲೇಜು ಸೇರಿದಂತೆ ಜಿಲ್ಲೆಯ ಒಟ್ಟು 40 ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಜ್ಞಾಪನ ಪತ್ರವನ್ನು ನೀಡಲಾಗಿದೆ.

ADVERTISEMENT

ಈಗಾಗಲೇ ವಿದ್ಯಾರ್ಥಿಗಳಿಂದ ವೃಕ್ಷಥಾನ್‌ ನೋಂದಣಿ ಶುಲ್ಕವನ್ನು ಸಂಗ್ರಹ ಮಾಡಲಾಗುತ್ತಿದೆ. ಆದರೆ, ವೃಕ್ಷಥಾನ್‌ ನೋಂದಣಿ ಶುಲ್ಕ ಪಾವತಿಗೆ ಬಹುತೇಕ ವಿದ್ಯಾರ್ಥಿಗಳು ಮತ್ತು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮುನ್ನಾ ಬಕ್ಷಿ, ‘ಸರ್ಕಾರಿ ಕಾಲೇಜುಗಳಿಗೆ ಬರುವ ಮಕ್ಕಳು ಬಹುತೇಕ ಬಡವರಿದ್ದಾರೆ. ಅವರಿಂದ ಬೇಕಾದರೆ ₹100 ಶುಲ್ಕ ತೆಗೆದುಕೊಳ್ಳಬಹುದು. ಆದರೆ, ₹500 ನೋಂದಣಿ ಶುಲ್ಕ ಕಟ್ಟಬೇಕು ಎಂಬುದು ಸರಿಯಲ್ಲ. ಇದು ವಿದ್ಯಾರ್ಥಿಗಳ ಶೋಷಣೆಯಾಗಿದೆ. ಡೊನೇಷನ್‌ ಸಂಗ್ರಹಿಸುವ ಖಾಸಗಿ ಕಾಲೇಜುಗಳಿಂದ ಬೇಕಾದರೆ ಹೆಚ್ಚಿನ ಶುಲ್ಕ ಕಟ್ಟಿಸಿಕೊಳ್ಳಲಿ’ ಎಂದರು.

ಡಿಸಿ ನಿರ್ದೇಶನದಂತೆ ₹500 ನೋಂದಣಿ ಶುಲ್ಕ ಸಂಗ್ರಹಕ್ಕೆ ಸೂಚನೆ ನೀಡಿದ್ದೇನೆ. ಆದರೆ ಇದುವರೆಗೂ ಯಾವ ಪಿಯು ಕಾಲೇಜುಗಳು ಶುಲ್ಕ ಸಂಗ್ರಹ ಮಾಡಿಲ್ಲ. ವಿದ್ಯಾರ್ಥಿ ಪೋಷಕರಿಂದ ವಿರೋಧ ಬಂದಿರುವ ವಿಷಯವನ್ನು ಡಿಸಿಯವರ  ಗಮನಕ್ಕೆ ತರುತ್ತೇನೆ
ಸಿ.ಕೆ.ಹೊಸಮನಿ ಉಪನಿರ್ದೇಶಕಪದವಿ ಪೂರ್ವ ಶಿಕ್ಷಣ ಇಲಾಖೆ 
ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಹೆಚ್ಚಿಸಬೇಕು ಎಂಬ ಉದ್ದೇಶದೊಂದಿಗೆ ಆಯೋಜಿಸಲಾಗುತ್ತಿರುವ ವೃಕ್ಷಥಾನ್‌ ಹೆರಿಟೇಜ್‌ ರನ್‌ ಉತ್ತಮ ಕಾರ್ಯ. ಆದರೆ ಇದಕ್ಕೆ ಬಡ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ ಶುಲ್ಕ ಸಂಗ್ರಹ ಮಾಡುವುದು ಸರಿಯಲ್ಲ 
-ಮುನ್ನಾ ಬಕ್ಷಿಸಾಮಾಜಿಕ ಕಾರ್ಯಕರ್ತ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.