ADVERTISEMENT

‘ಕಾರ್ಮಿಕರು ದೇಶದ ಬೆನ್ನೆಲುಬು’

​ಪ್ರಜಾವಾಣಿ ವಾರ್ತೆ
Published 1 ಮೇ 2022, 12:46 IST
Last Updated 1 ಮೇ 2022, 12:46 IST
ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಕಾರ್ಮಿಕರಾದ ಶೇಖಪ್ಪ ಲಕ್ಷ್ಮಣ ಮಳೆಪ್ಪನವರ, ಅಮೋಗಿ ಹಣಮಂತ ಗುಗದಡ್ಡಿ, ನಾರಾಯಣ ಮುದ್ಗಲ್, ಹಸನ್ ಬುಕ್ಕದ ಮತ್ತು ರಸೂಲಸಾಬ ಗೊಳಸಗಾವ ಅವರನ್ನು ಸನ್ಮಾನಿಸಲಾಯಿತು 
ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಕಾರ್ಮಿಕರಾದ ಶೇಖಪ್ಪ ಲಕ್ಷ್ಮಣ ಮಳೆಪ್ಪನವರ, ಅಮೋಗಿ ಹಣಮಂತ ಗುಗದಡ್ಡಿ, ನಾರಾಯಣ ಮುದ್ಗಲ್, ಹಸನ್ ಬುಕ್ಕದ ಮತ್ತು ರಸೂಲಸಾಬ ಗೊಳಸಗಾವ ಅವರನ್ನು ಸನ್ಮಾನಿಸಲಾಯಿತು    

ವಿಜಯಪುರ:ಕಾರ್ಮಿಕರು ನಮ್ಮ ದೇಶದ ಬೆನ್ನೆಲುಬು, ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರೊ. ರಾಜು ಆಲಗೂರ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಕಾರ್ಮಿಕರಿಗಾಗಿ ಯಾವುದೇ ಸೌಲಭ್ಯಗಳು ಇರಲಿಲ್ಲ, ಅವರು ದಿನದಲ್ಲಿ 18 ಗಂಟೆಗಳ ಕಾಲ ಕೆಲಸ ಮಾಡಬೇಕಿತ್ತು. ಆದರೆ, ಸ್ವಾತಂತ್ರ್ಯಾನಂತರ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರು ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ದಿನದಲ್ಲಿ 8 ಗಂಟೆಗಳ ಕಾಲ ಕೆಲಸ ಮಾಡುವ ಕಾಯ್ದೆ ಜಾರಿಮಾಡಿದರು. ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿ ಅವರ ಜೀವನಸ್ಥಿತಿ ಸುಧಾರಿಸಲು ಕಾರಣರಾದರು ಎಂದು ಹೇಳಿದರು.

ADVERTISEMENT

ಮಾಜಿ ಸಚಿವರಾದ ಅಪ್ಪಾಜಿ ನಾಡಗೌಡ ಮಾತನಾಡಿ, ಕಾರ್ಮಿಕರು ನಮಗಾಗಿ ಹಗಲಿರುಳೆನ್ನದೆ ದುಡಿಯುತ್ತಾರೆ. ಕಾರ್ಮಿಕರಲ್ಲಿ ವಲಸೆ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರು ಇದ್ದು, ವಲಸೆ ಕಾರ್ಮಿಕರಲ್ಲಿ ಬಹುತೇಕರು ಹೊರರಾಜ್ಯಗಳಿಗೆ ಹಾಗೂ ಕಾಫಿ ತೋಟಗಳಲ್ಲಿ ದುಡಿಯಲು ಹೋಗಿ ವರ್ಷದಲ್ಲಿ 6 ತಿಂಗಳು ಕೆಲಸವಿಲ್ಲದೆ ತಮ್ಮ ಊರುಗಳಿಗೆ ಮರಳುತ್ತಾರೆ. ಇಂತಹ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಲಸೆ ಕಾರ್ಮಿಕರ ಮಕ್ಕಳಿಗಾಗಿ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ವಸತಿ ಶಾಲೆಗಳನ್ನು ತೆರೆಯಬೇಕು ಹಾಗೂ ಕಾರ್ಮಿಕರಿಗೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದರು.

ಡಿ.ಸಿ.ಸಿ. ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಸುಭಾಷ್ ಕಾಲೇಬಾಗ, ಬಸೀರಅಹ್ಮದ ಮುಲ್ಲಾ, ಚಂದ್ರಕಾಂತ ಬಿರಾದಾರ ಚಿಕ್ಕರೂಗಿ, ಚಾಂದಸಾಬ ಗಡಗಲಾವ, ಸುಭಾಸ ಛಾಯಾಗೋಳ, ಎಸ್.ಎಂ. ಪಾಟೀಲ ಗಣಿಹಾರ, ಪ್ರೊ.ಎಂ.ಜಿ. ಯಂಕಂಚಿ, ಶ್ರೀಕಾಂತ ಛಾಯಾಗೋಳ, ಗುರಪ್ಪ ಯಂಕಂಚಿ, ವಸಂತ ಹೊನಮೊಡೆ, ಈರಪ್ಪ ಜಕ್ಕಣ್ಣವರ, ಎಂ.ಎಲ್. ಮಕಾನದಾರ, ಶಂಕರಸಿಂಗ ಹಜೇರಿ, ಆರತಿ ಶಹಾಪೂರ, ರಜಾಕಸಾಬ ಕಾಖಂಡಕಿ, ತಾಜುದ್ದೀನ್‌ ಖಲೀಫಾ, ಬಾಬು ಯಾಳವಾರ, ಮಂಜುಳಾ ಗಾಯಕವಾಡ, ಎಂ.ಎ. ಬಕ್ಷಿ, ಮಲ್ಲಿಕಾರ್ಜುನ ಪರಸಣ್ಣವರ, ಮಂಜುಳಾ ಜಾಧವ, ಲಕ್ಷ್ಮೀ ಕ್ಷೀರಸಾಗರ, ಸುಜಾತಾ ಸಿಂಧೆ, ಶಕುಂತಲಾ ಕಿರಸೂರ, ಕಮಲಾ ಮಾಕಾಳಿ, ಶಕುಂತಲಾ ರೇವಣಕರ, ಕಸ್ತೂರಿ ಬಿ. ಪೂಜಾರಿ, ತಿಪ್ಪಣ್ಣ ಕಮಲದಿನ್ನಿ, ಕಲ್ಲಪ್ಪ ಪರಶೆಟ್ಟಿ, ಮೀರಾಸಾಬ ಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.