ADVERTISEMENT

ಚಡಚಣದ ಸಂಗಮೇಶ್ವರ ಜಾನುವಾರು ಜಾತ್ರೆಯಲ್ಲಿ ಜನರ ರಂಜಿಸಿದ ಮಲ್ಲರ ಕಾಳಗ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 2:19 IST
Last Updated 23 ಜನವರಿ 2026, 2:19 IST
<div class="paragraphs"><p>ಚಡಚಣದ ಸಂಗಮೇಶ್ವರ ಜಾನುವಾರು ಜಾತ್ರೆ ನಿಮಿತ್ತ ಮಂಗಳವಾರ ಜರುಗಿದ ಕುಸ್ತಿ ಪಂದ್ಯಾವಳಿಗೆ ಗಣ್ಯರು ಚಾಲನೆ ನೀಡಿದರು</p></div>

ಚಡಚಣದ ಸಂಗಮೇಶ್ವರ ಜಾನುವಾರು ಜಾತ್ರೆ ನಿಮಿತ್ತ ಮಂಗಳವಾರ ಜರುಗಿದ ಕುಸ್ತಿ ಪಂದ್ಯಾವಳಿಗೆ ಗಣ್ಯರು ಚಾಲನೆ ನೀಡಿದರು

   

ಚಡಚಣ: ಸ್ಥಳಿಯ ಸಂಗಮೇಶ್ವರ ಜಾತ್ರಾ ಮಹೋತ್ಸವ ಹಾಗೂ ಜಾನುವಾರು ಜಾತ್ರೆ ನಿಮಿತ್ತ ಈಚೆಗೆ ಜರುಗಿದ ಸುಪ್ರಸಿದ್ಧ ಮಲ್ಲರ ಕಾಳಗ ನೋಡುಗರ ಮೈ ನವಿರೇಳಿಸುವಂತೆ ಮಾಡಿತು.

ಪ್ರೇಕ್ಷಕರ ಕರತಾಡನ, ಸಿಳ್ಳೆ ಕುಸ್ತಿಪಟುಗಳನ್ನು ಹುರಿದುಂಬಿಸಿತು. ಕುಸ್ತಿ ಪಂದ್ಯಾವಳಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಪೈಲ್ವಾನರು ಪಾಲ್ಗೊಂಡಿದ್ದರು.

ADVERTISEMENT

ಶುಭಂ ದುದ್ಯಾಳೆ, ರಾಮಚಂದ್ರ ಧೂಮಕನಾಳ ನಡುವೆ ನಡೆದ ಕಾಳಗಕ್ಕೆ ಶಾಸಕ ವಿಠ್ಠಲ ಕಟಕಧೊಂಡ ₹ 71 ಸಾವಿರ, ರಿಯಾಜ್‌ ನದಾಫ ಹಾಗೂ ಸುನೀಲ ಬೀಳೂರ ಅವರ ನಡುವೆ ನಡೆದ ಕಾಳಗಕ್ಕೆ ಮಾಜಿ ಶಾಸಕ ದೇವಾನಂದ ಚವ್ಹಾಣ ₹ 71 ಸಾವಿರ ದೇಣಿಗೆ ಘೋಷಿಸಿದರು.

ಬಿಜೆಪಿ ಚಡಚಣ ಮಂಡಳ ಅಧ್ಯಕ್ಷ ಕಾಂತುಗೌಡ ಪಾಟೀಲ ಬಬಲು ಹೋನಮಾನೆ ಹಾಗೂ ವಿನೋದ ಸಿಂಗಾರೆ ₹ 55 ಸಾವಿರ ದೇಣಿಗೆ ಘೋಸಿದರು. ಮುಖಂಡರಾದ ಸಂಜು ಐಹೊಳಿ ₹ 25 ಸಾವಿರ, ರಾಮ ಅವಟಿ ₹ 15 ಸಾವಿರ ಹಾಗೂ ವಿಜಯ ಕುಮಾರ ಅವಟಿ ₹ 11 ಸಾವಿರ ಸೇರಿದಂತೆ ಜಾತ್ರಾ ಕಮಿಟಿ ಸುಮಾರು ₹ 3 ಲಕ್ಷಕ್ಕೂ ಹೆಚ್ಚು ಮೊತ್ತದ ಬಹುಮಾನವನ್ನು ಕುಸ್ತಿಪಟುಗಳಿಗೆ ನೀಡಿತು.

ಪಂದ್ಯಾವಳಿಗೂ ಮುನ್ನ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ವಿದೇವಾನಂದ ಚವ್ಹಾಣ, ಮುಖಂಡ ಸಂಜೀವ ಐಹೊಳ್ಳಿ, ಕಾಂತುಗೌಡ ಪಾಟೀಲ, ತಹಶೀಲ್ದಾರ್‌ ಸಂಜಯ ಇಂಗಳೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಲ್ಲು ಧೋತ್ರೆ, ಉಪಾಧ್ಯಕ್ಷ ಇಲಾಯಿ ನದಾಫ್‌ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.

ಚಡಚಣದ ಸಂಗಮೇಶ್ವರ ಜಅನುವಾರು ಜಾತ್ರೆ ನಿಮಿತ್ಯ ಮಂಗಳವಾರ ಜರುಗಿದ ಕುಸ್ತಿ ಪಂದ್ಯವಳಿಯಲ್ಲಿ ಎದುರಾಳಿಯನ್ನು ಚಿತ್‌ ಮಾಡಲು ಸೆಣಸಾಡುತ್ತಿರುವ ಕುಸ್ತಿ ಪಟುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.