ADVERTISEMENT

ಸಾಹಿತಿ ಸಿಂಪಿ ಲಿಂಗಣ್ಣ ಅಪರೂಪದ ಸಾಧಕ: ಮಲ್ಲಿಕಾರ್ಜುನ ಮೇತ್ರಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 5:07 IST
Last Updated 13 ಫೆಬ್ರುವರಿ 2026, 5:07 IST
ವಿಜಯಪುರದ ಬಿ.ಎಲ್.ಡಿ.ಇ ರಸ್ತೆಯ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಡಾ.ಸಿಂಪಿ ಲಿಂಗಣ್ಣವರ ಜನ್ಮದಿನ ಆಚರಿಸಲಾಯಿತು
ವಿಜಯಪುರದ ಬಿ.ಎಲ್.ಡಿ.ಇ ರಸ್ತೆಯ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಡಾ.ಸಿಂಪಿ ಲಿಂಗಣ್ಣವರ ಜನ್ಮದಿನ ಆಚರಿಸಲಾಯಿತು   

ವಿಜಯಪುರ: ‘ಸಾಹಿತಿ ಸಿಂಪಿ ಲಿಂಗಣ್ಣ ಅಪರೂಪದ ಸಾಧಕರಾಗಿದ್ದಾರೆ. ಹಳ್ಳಿಗರ ಮಧ್ಯವಿದ್ದು, ಅವರ ಹಾಡುಗಳನ್ನು ಸಂಗ್ರಹಿಸಿ, ಕನ್ನಡ ನಾಡಿಗೆ ಕೊಡುಗೆಯಾಗಿ ಕೀರ್ತಿ ತಂದುಕೊಟ್ಟವರು’ ಎಂದು ಮಲ್ಲಿಕಾರ್ಜುನ ಮೇತ್ರಿ ಹೇಳಿದರು.

ನಗರದ ಬಿ.ಎಲ್.ಡಿ.ಇ ರಸ್ತೆಯ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಡಾ.ಸಿಂಪಿ ಲಿಂಗಣ್ಣವರ 121ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಸಿಂಪಿ ಲಿಂಗಣ್ಣನವರು ಸಾಹಿತ್ಯದ ಋಷಿಯಾಗಿ ಅರವಿಂದರ ಹಾಗೂ ರಾಮತೀರ್ಥರ ತಾತ್ವಿಕ ಚಿಂತನೆಯನ್ನು ಅನುವಾದದ ಮೂಲಕ ಕನ್ನಡಕ್ಕೆ ತಂದ ಶ್ರೇಯ ಅವರದ್ದಾಗಿದೆ. ಸಾಹಿತ್ಯದ ಆರಾಧಕರಾಗಿ ಕೆಲಸ ಮಾಡಿ ಅನೇಕ ಗೌರವ ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ಶಿವಶರಣಪ್ಪ ಶಿರೂರ ಯಾಳಗಿ ಮಾತನಾಡಿ,‘ಈಗಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಜನಪದ ಸಾಹಿತ್ಯ ಹಲವಾರು ತಿರುವುಗಳನ್ನು ಪಡೆದುಕೊಂಡು ಬೆಳೆಯುತ್ತಿದೆ. ಮೂಲ ಜಾನಪದ ಕಲೆಯನ್ನು ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಮರೆಯದೇ ಉಳಿಸಿ ಬೆಳೆಸಬೇಕು. ನಮ್ಮ ಹಿರಿಯರು ಮನೆ ಕೆಲಸ ಮಾಡುವಾಗ, ಕುಟ್ಟುವಾಗ, ಬೀಸುವಾಗ, ಹಂತಿ ಪದಗಳು ಇಂದಿಗೂ ಜನಮಾನಸದಲ್ಲಿ ನೆಲೆನಿಂತಿವೆ’ ಎಂದರು.

ಬಿ.ಆರ್.ಬನಸೋಡೆ ಮಾತನಾಡಿ, ‘ಸಿಂಪಿಲಿಂಗಣ್ಣ ಅವರೊಂದಿಗೆ ಕಳೆದ ಕ್ಷಣಗಳ ಬಗ್ಗೆ ಮೆಲುಕು ಹಾಕಿ, ಇವರು ಚಡಚಣದಲ್ಲಿ ನಾಡಹಬ್ಬವನ್ನು ಅದ್ದೂರಿಯಾಗಿ ಎಲ್ಲರನ್ನು ಒಗ್ಗೂಡಿಸಿ ಆಗಿನ ಕಾಲದಲ್ಲಿಯೇ ಆಚರಿಸುತ್ತಿದ್ದರು. ಪ್ರಸ್ತುತ ಅಂತಹ ಆಚರಣೆಗಳು ಕಣ್ಮರೆಯಾಗುತ್ತಿವೆ’ ಎಂದರು.

ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಾಚಾರ್ಯ ಡಾ.ಎಸ್.ಟಿ.ಬೋಳರಡ್ಡಿ, ಹಲಸಂಗಿ ಪ್ರತಿಷ್ಠಾನದ ಸದಸ್ಯರಾದ ಡಾ.ವಿ.ಡಿ.ಐಹೊಳ್ಳಿ, ಡಾ.ಸಿಂಪಿ ಲಿಂಗಣ್ಣನವರ ಪುತ್ರರಾದ ಆರ್.ಎನ್. ಸಿಂಪಿ ಹಾಗೂ ಅರುಣ ಸಿಂಪಿ, ಶಂಕ್ರಪ್ಪ, ಗಿರಿಮಲ್ಲಪ್ಪ ಗಲಗಲಿ, ಸುಭಾಷ ಯಾದವಾಡ, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾದ ಪುಲಕೇಶಿ ಪುರುಷೋತ್ತಮ ಗಲಗಲಿ, ದಾಕ್ಷಾಯಣಿ ರಮೇಶ ಬಿರಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.