ADVERTISEMENT

ಸಿಂದಗಿ: ಜೂನ್ 21 ರಿಂದ ಯೋಗ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 13:19 IST
Last Updated 20 ಜೂನ್ 2025, 13:19 IST
ಸಿಂದಗಿ ಪಟ್ಟಣದ ಸಾರಂಗಮಠದ ಆವರಣದಲ್ಲಿನ ಸಭಾ ಮಂಟಪದಲ್ಲಿ ಸಿದ್ಧಗೊಂಡ ಯೋಗ ಸಪ್ತಾಹದ ವೇದಿಕೆ
ಸಿಂದಗಿ ಪಟ್ಟಣದ ಸಾರಂಗಮಠದ ಆವರಣದಲ್ಲಿನ ಸಭಾ ಮಂಟಪದಲ್ಲಿ ಸಿದ್ಧಗೊಂಡ ಯೋಗ ಸಪ್ತಾಹದ ವೇದಿಕೆ   

ಸಿಂದಗಿ: ಪಟ್ಟಣದ ಸಾರಂಗಮಠದ ಆವರಣದಲ್ಲಿನ ಭವ್ಯ ಸಭಾಮಂಟಪದಲ್ಲಿ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅಡಿಯಲ್ಲಿರುವ ಎಲ್ಲ ಅಂಗ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 21 ರಿಂದ ಜೂನ್ 29 ರವರೆಗೆ ನಡೆಯಲಿದೆ.

21 ರಂದು ಬೆಳಿಗ್ಗೆ 6 ಗಂಟೆಗೆ ಯೋಗ ಸಪ್ತಾಹ ಕಾರ್ಯಕ್ರಮವನ್ನು ಸಾರಂಗಮಠ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಸಕ ಅಶೋಕ ಮನಗೂಳಿ ಉದ್ಘಾಟಿಸುವರು.

ಸಾರಂಗಮಠದ ಉತ್ತಾರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ತಹಶೀಲ್ದಾರ್‌ ಪ್ರದೀಪಕುಮಾರ ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ADVERTISEMENT

ಯಾದಗಿರಿ ಜಿಲ್ಲೆಯ ಗೋಗಿ ಜ್ಞಾನಯೋಗ ಮಂದಿರದ ಯೋಗ ಸಾಧಕ ಯೋಗಿ ಜಯಗುರುದೇವ ಸ್ವಾಮೀಜಿ ಅವರಿಂದ ಪ್ರತಿನಿತ್ಯ ಬೆಳಿಗ್ಗೆ 6 ರಿಂದ ಒಂದು ಗಂಟೆ ಅಷ್ಟಾಂಗ ಯೋಗ, ಸಂಜೆ 7 ರಿಂದ ಒಂದು ಗಂಟೆ ಪ್ರಣವ ಧ್ಯಾನ ಯೋಗ ನಡೆಯಲಿದೆ.

ಯೋಗ ಸಪ್ತಾಹ ವೇದಿಕೆ ಸಿದ್ಧಗೊಂಡಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.