ADVERTISEMENT

ಆದ್ಯತಾ ಚಿಕಿತ್ಸೆ ಜಾರಿಯಾಗಲಿ: ‘ನಾವು ಭಾರತೀಯರು‘ ಸಂಘಟನೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 16:55 IST
Last Updated 5 ಜುಲೈ 2020, 16:55 IST

ಬೆಂಗಳೂರು: ಆರೋಗ್ಯ ಸ್ಥಿತಿ ಗಂಭೀರವಾಗಿರುವವರಿಗೆ ಆಸ್ಪತ್ರೆಯಲ್ಲಿ ಹಾಗೂ ಸುಧಾರಿತ ಸ್ಥಿತಿಯಲ್ಲಿ ಇರುವವರಿಗೆ ಮನೆ ಅಥವಾ ಕೋವಿಡ್ ಸಮುದಾಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ‘ನಾವು ಭಾರತೀಯರು‘ ಸಂಘಟನೆ ಸರ್ಕಾರಕ್ಕೆ ಒತ್ತಾಯಿಸಿದೆ.

ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳು ಹಾಗೂ ವೆಂಟಿಲೇಟರ್ ಲಭ್ಯತೆಯ ಮಾಹಿತಿ ಸಿಗಬೇಕು. ಆರೋಗ್ಯ ಸೌಲಭ್ಯಗಳು, ಸಬ್ಸಿಡಿ, ವಿವಿಧ ಸರ್ಕಾರಿ ಇಲಾಖೆಗಳ ಜವಾಬ್ದಾರಿ, ಖಾಸಗಿ ಆಸ್ಪತ್ರೆಗಳ ಪಾತ್ರಗಳ ಕುರಿತು ನೂತನ ನೀತಿಯನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT