ADVERTISEMENT

ಆಲಿಕಲ್ಲು ಮಳೆ: ಬೆಳೆ ಹಾನಿ

ಸ್ಥಳ ಪರಿಶೀಲಿಸದ ಅಧಿಕಾರಿಗಳು: ದೂರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 12:41 IST
Last Updated 5 ಏಪ್ರಿಲ್ 2018, 12:41 IST

ಯಾದಗಿರಿ: ತಾಲ್ಲೂಕಿನ ಗೋನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೂಗೂರು, ಶಿವಪೂರ, ಗೋನಾಲ, ಅಗ್ನಿಹಾಳ, ಕೊಂಗಂಡಿ, ಗೂಂಡ್ಲೂರ ಗ್ರಾಮದಲ್ಲಿ ಸೋಮವಾರ ರಾತ್ರಿ ಬಿದ್ದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ನೂರಾರು ಎಕರೆ ಭತ್ತದ ಬೆಳೆ ಸಂಪೂರ್ಣ ಹಾಳಾಗಿದೆ.ಮಳೆಗೂ ಮುಂಚಿತವಾಗಿ 15 ನಿಮಿಷ ಆಲಿಕಲ್ಲು ಮಳೆ ಬಿದ್ದಿದೆ. ಆಲಿಕಲ್ಲು ಬಿದ್ದಿದ್ದರಿಂದ ಕೋಯ್ಲಿಗೆ ಬಂದಿದ್ದ ಭತ್ತದ ಬೆಳೆಗೆ ಹಾನಿಯಾಗಿದೆ ಎಂದು ಗ್ರಾಮಸ್ಥರಾದ ಸಿದ್ದೇಶ್, ಗುರುರಾಜ, ಭೀಮಣ್ಣ ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದರು.ನಂತರ ಒಂದು ಗಂಟೆ ನಿರಂತವಾಗಿ ಸೂಗೂರು, ಶಿವಪೂರ, ಗೋನಾಲ, ಅಗ್ನಿಹಾಳ, ಕೊಂಗಂಡಿ, ಗೂಂಡ್ಲೂರ ಗ್ರಾಮಗಳಲ್ಲಿ ಮಳೆಯಾಯಿತು ಎಂದು ಅವರು ತಿಳಿಸಿದರು.ಮಳೆಯಿಂದ ಬೆಳೆಹಾನಿಯಾದರೂ ಸ್ಥಳಕ್ಕೆ ತಹಶೀಲ್ದಾರ್, ಕೃಷಿ ಇಲಾಖೆ ಅಧಿಕಾರಿಳು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ, ನಮ್ಮ ಅಹವಾಲಿಗೆ ಸಮರ್ಪಕ ಸ್ಪಂದನೆ ಸಿಕ್ಕಿಲ್ಲ. ನಮಗೆ ದಿಕ್ಕು ತೋಚದಂತಾಗಿದೆ ಎಂದು ಗ್ರಾಮಸ್ಥರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.