ADVERTISEMENT

ಆಸರೆಗೆ ಕಾಯ್ದಿರುವ ಸಂತ್ರಸ್ತರು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 11:05 IST
Last Updated 12 ಮಾರ್ಚ್ 2011, 11:05 IST

ಹುಣಸಗಿ: ನೆರೆಯಿಂದ ಸಂತ್ರಸ್ತರಾದವರಿಗೆ ಸೂರು ಕಲ್ಪಿಸುವ ಯೋಜನೆ ಜಿಲ್ಲೆಯಲ್ಲಿ ಕುಂಠಿತವಾಗಿ ಸಾಗಿದ್ದು, ಸುರಪುರ ತಾಲ್ಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿನ ಮನೆಗಳು ನೆಲ ಬಿಟ್ಟು ಏಳುವ ಲಕ್ಷಣಗಳೇ ಕಾಣುತ್ತಿಲ್ಲ.

ಭೂಸೇನಾ ನಿಗಮದಿಂದ ನಿರ್ಮಿಸುತ್ತಿರುವ ಮನೆಗಳ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗಿದ್ದು. ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಸುಮಾರು 113 ಮನೆಗಳಲ್ಲಿ  ಸುಮಾರು 92 ಮನೆ ನಿರ್ಮಾಣ ಕಾರ್ಯ ನಡೆದಿದೆ.

ಇದುವರೆಗೆ ಇಪ್ಪತ್ತು  ಮನೆಗಳು ಮಾತ್ರ ಆರ್‌ಸಿಸಿ ಆಗಿದೆ. ಇನ್ನು 20 ಮನೆಗಳು ಲಿಂಟಲ್‌ವರೆಗೆ ಬಂದಿದ್ದು, ಉಳಿದ ಮನೆಗಳು ಇನ್ನೂ ನೆಲಮಟ್ಟದಲ್ಲಿಯೇ ಇರುವುದು ಕಂಡು ಬಂತು.
ನೆರೆ ಸಂತ್ರಸ್ತರಿಗೆ ಕೆಲವೇ ತಿಂಗಳು ಗಳಲ್ಲಿ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳಿದ್ದ ಸರ್ಕಾರ, ಸುಮಾರು 2 ವರ್ಷ ಸಮೀಪಿಸಿದರೂ ಇನ್ನೂ ಮನೆ ನಿರ್ಮಾಣ ಕಾರ್ಯ ಮುಗಿದಿಲ್ಲ. ರಾಜ್ಯದ ನಾನಾ ಭಾಗಗಗಳಲ್ಲಿ ಮನೆ ಹಾಸ್ತಾಂತರಿಸುತ್ತಿರುವ ಮುಖ್ಯಮಂತ್ರಿ ಗಳು ಮತ್ತು ಉಸ್ತುವಾರಿ ಸಚಿವರು ನಮ್ಮ ಗ್ರಾಮದ ಬಗ್ಗೆಯೂ ಕಾಳಜಿ ವಹಿಸಲಿ ಎಂದು ಗ್ರಾಮದ ಬಸನಗೌಡ ಪಾಟೀಲ ನೊಂದು ನುಡಿಯುತ್ತಾರೆ.

ತ್ವರಿತವಾಗಿ ನಿರ್ಮಾಣ ಮಾಡಿ ದರೂ ಎಲ್ಲ ಮನೆಗಳ ನಿರ್ಮಾಣಕ್ಕೆ ಸುಮಾರು ಮೂರು ತಿಂಗಳು ತಗುಲ ಲಿದ್ದು, ಜಿಲ್ಲಾಧಿಕಾರಿಗಳು ಒಂದು ತಿಂಗಳಲ್ಲಿ ಆಸರೆ ಮನೆ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ ಎಂದು ಪತ್ರಿಕೆಗಳಲ್ಲಿ ಹೇಳಿದ್ದು ನಮಗೂ ಸಂತಸವಾಗಿದೆ. ಇನ್ನು ಮೂರು ತಿಂಗಳಲ್ಲಿಯಾದರೂ ಮನೆ ನಿರ್ಮಿಸಿ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಿ ಮನೆ ಗಳನ್ನು ಹಸ್ತಾಂತರಿಸಲಿ ಎನ್ನುವುದು ಯಮನಪ್ಪಗೌಡ ಅವರ ಮನವಿ.

ಮನೆ ನಿರ್ಮಾಣ ಕಾರ್ಯ ನಿಧಾನವಾಗಿ ನಡೆದಿದ್ದರೂ ನಿರ್ಮಾಣ ಕಾರ್ಯಕ್ಕೆ ಬಳಸಲಾದ ಸಾಮಗ್ರಿಗಳು ಉತ್ತಮ ಗುಣಮಟ್ಟದ್ದಾಗಿವೆ ಎಂದು ಬಸಯ್ಯ ಹಿರೇಮಠ ಹೇಳುತ್ತಾರೆ.ನೆರೆ ಬಂದು ಕಟ್ಟಿಕೊಂಡ ಮನೆ ಕಳೆದುಕೊಂಡು ವರ್ಷದ ಗತಿಸಿ ಹೋಗಿದ್ದರೂ, ಸ್ವಂತದ್ದೊಂದು ಸೂರಿ ಗಾಗಿ ಕಾದಿರುವ ಉಪ್ಪಲದಿನ್ನಿಯ ಜನರಿಗೆ ‘ಆಸರೆ’ ನೀಡಬೇಕಾಗಿದೆ.

ಇನ್ನೆರಡು ತಿಂಗಳು ಗತಿಸಿದರೆ ಮತ್ತೊಂದು ಮಳೆಗಾಲ ಎದುರಿಸ ಬೇಕಾಗುತ್ತದೆ. ಅಷ್ಟರಲ್ಲಾದರೂ ಆಸರೆ ಮನೆಗಳು ಬದುಕಿಗೆ ಆಸರೆ ಆಗಲಿ ಎನ್ನುವ ಬೇಡಿಕೆ ಸಂತ್ರಸ್ತರದ್ದು.
ಸದ್ಯ ಉಪ್ಪಲದಿನ್ನಿ ಗ್ರಾಮದಲ್ಲಿ ವಾಸಿಸುತ್ತಿರುವ ಬಹುತೇಕ ಮನೆಗಳು ಬಿದ್ದು ಹೋಗಿದ್ದು, ಗ್ರಾಮಸ್ಥರು ಯಾವಾಗ ಹೊಸ ಮನೆಗೆ ಹೊಗು ತ್ತೇವೆ ಎಂದು ನಿರೀಕ್ಷೆಯಲ್ಲಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.