ADVERTISEMENT

`ಎರಡು ಅವಧಿ ಬೆಳೆಗಳಿಗೆ ನೀರು'

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 6:59 IST
Last Updated 23 ಏಪ್ರಿಲ್ 2013, 6:59 IST

ಹುಣಸಗಿ: ನಾನು ಅಧಿಕಾರಕ್ಕೆ ಬಂದಲ್ಲಿ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಿ ಕಾಲುವೆಗೆ ಮುಂಗಾರು ಮತ್ತು  ಹಿಂಗಾರು ಹಂಗಾಮಿಗೆ ಮಾರ್ಚ ಅಂತ್ಯದವರೆಗೆ ನೀರು ಕೊಡಿಸಲು ಪ್ರಯತ್ನಿಸುವದಾಗಿ ಕಾಂಗ್ರೆಸ್ ಐ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ನುಡಿದರು.

ಹುಣಸಗಿಯಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಹೃದಯ ಭಾಗವಾಗಿದ್ದ ಹುಣಸಗಿಯಲ್ಲಿ ಈ ಬಾರಿ ನಮ್ಮ ಪಕ್ಷಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ಪಕ್ಷದ ತತ್ವ ಸಿದ್ದಾಂತ ಮತ್ತು ಮುಂದಿನ ಅವಧಿಯಲ್ಲಿ ನಾವು ಮಾಡಬಹುದಾದ ಅಭಿವೃದ್ಧಿ ಕಾರ್ಯಗಳನ್ನು ಅರಿತು ಜನ ನಿತ್ಯ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಜನ ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದರು.

ಹುಣಸಗಿ ಬ್ಲಾಕ್ ಕಾಂಗೈ ಅಧ್ಯಕ್ಷ ರಾಜಶೇಖರಗೌಡ ವಜ್ಜಲ, ಶಿವಣ್ಣ ಮಂಗ್ಯಾಳ ಮಾತನಾಡಿ, ಈ ಚುನಾವಣೆಯಲ್ಲಿ ಹಳ್ಳಿಹಳ್ಳಿಗಳಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ, ಇದು ಶುಭ ಸಂಕೇತವಾಗಿದೆ. ಈ ಬಾರಿ ಅತ್ಯಂತ ಹೆಚ್ಚಿನ ಮತಗಳಿಸಿ ರಾಜಾ ವೆಂಕಟಪ್ಪನಾಯಕ ಜಯಗಳಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಇದೇ ಸಂದರ್ಭದಲ್ಲಿ ಹಲವಾರು ಜನರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಬಸನಗೌಡ ಯಡಿಯಾಪುರ, ಸೂಲಪ್ಪ ಕಮತಗಿ, ತಿಪ್ಪರಾಜಗೌಡ ಬಾಚಿಮಟ್ಟಿ, ಮಹಾದೇವಪ್ಪ ಬಳಿ, ಸಿದ್ದಣ್ಣ ಮಲಗಲದಿನ್ನಿ, ಸುರೇಶ ನೀರಲಗಿ, ಸೂಗಪ್ಪ ಚಂದಾ, ಬಾಬುಚೌದ್ರಿ, ಮಡಿವಾಳಪ್ಪ ಮಿಲ್ಟ್ರಿ, ಬಸವರಾಜ ಸಜ್ಜನ, ಶಾಂತಣ್ಣ ದೊರೆ ಸೇರಿದಂತೆ ಇತರರು ಇದ್ದರು. ಕಾಮನಟಗಿ, ಗೆದ್ದಲಮರಿ, ಬಲಶೆಟ್ಟಿಹಾಳ ಸೇರಿದಂತೆ ಇತರ ಗ್ರಾಮಗಳಲ್ಲಿ ಪ್ರಚಾರ  ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.