ಕೆಂಭಾವಿ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಬಸಣ್ಣ ಮಾಹಾಂತಗೌಡ ನೇತೃತ್ವದ ತಂಡವು ಅವರು ಶಾಲೆ ಪ್ರಾರಂಭವಾದ ಮೂರನೇ ದಿನವಾದ ಶುಕ್ರವಾರ ಮಿಂಚಿನ ಸಂಚಾರ ನಡೆಸಿ, ಇಬ್ಬರು ಮುಖ್ಯಗುರುಗಳನ್ನು ಅಮಾನತು ಮಾಡಿದೆ.
ಇಲ್ಲಿಗೆ ಸಮೀಪದ ಕಾಚಾಪುರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋದ್ಯಾಪಕ ಅಂಬರೀಷ ಹಾಗೂ ಮುದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ. ಎಂ. ಮುಜಾವರ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಉಪನಿರ್ದೆಶಕ ಬಸಣ್ಣ ಮಹಾಂತಗೌಡ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೋದಿಗೆ ಮಾತನಾಡಿ, ಕಾಚಾಪುರ ಶಾಲೆಯ ಮುಖ್ಯಗುರು, ಸರ್ವಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ, ಕಳೆದ ಮೂರುವರ್ಷಗಳಿಂದ 3.5 ಲಕ್ಷ ರೂಪಾಯಿ ವೆಚ್ಚದ ಶಾಲಾ ಕಟ್ಟಡ ಕಾಮಗಾರಿ ಮಾಡದೇ ಹಾಗೆಯೇ ಕಾಲಹರಣ ಮಾಡುತ್ತಿದ್ದರು. ಅಲ್ಲದೆ, ಹಳೇ ಶೌಚಾಲಯದ ಕಲ್ಲುಗಳನ್ನು ಬಳಸಿ ಹೊಸ ಕಟ್ಟಡ ಕಟ್ಟಲಾಗಿದೆ ಎಂದು ತಿಳಿದು ಬಂದಿದೆ. ಶಾಲಾ ಮಕ್ಕಳಿಗೆ ವಾರೊಕ್ಕೊಮ್ಮೆ ಬಿಸಿಯೂಟ ಹಾಕುತ್ತಾರೆ ಎಂಬುವುದನ್ನು ಶಾಲಾಮಕ್ಕಳೇ ನನಗೆ ನೇರವಾಗಿ ತಿಳಿಸಿದ್ದಾರೆ.
ಮುದನೂರು ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಎಂ.ಎಂ. ಮುಜಾವರ ಶಾಲೆಯಲ್ಲಿ ಮಕ್ಕಳೇ ಇಲ್ಲ ಇಂತಹ ಶಾಲೆಯನ್ನು ಹಾಗೇಯೆ ಮುಂದುವರೆಸಿಕೊಂಡು ಹೊಗಿದ್ದು, ಶಾಲೆಗೆ ಭೇಟಿ ನೀಡಿದಾಗ ಬೇಳಕಿಗೆ ಬಂದಿದ್ದು, ಈ ಶಾಲೆಯಲ್ಲಿದ್ದ ಇನ್ನೊಬ್ಬ ಶಿಕ್ಷಕಿಯನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದ್ದು ಶಿಕ್ಷಕರು ಮಾತ್ರ ಇನ್ನು ಕೆಲವು ಶಾಲೆಗಳಿಗೆ ಹಾಜರಾಗದೇ ಇರುವುದು, ರಜೆ ಹಾಕಿರುವುದು, ಕಂಡುಬಂದಿದ್ದು, ಶಾಲೆ ಪ್ರಾರಂಭವಾಗಿ ಮಕ್ಕಳು ಶಾಲೆಗಳಿಗೆ ಬರುತ್ತಿದ್ದು ಶಿಕ್ಷಕರು ಮಾತ್ರ ವರ್ಗಾವಣೆ ಸೇರಿದಂತೆ ಅನೇಕ ಕಾರಣಗಳನ್ನು ಕೊಟ್ಟು ಶಾಲೆಯಿಂದ ದೂರ ಉಳಿಯುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಇಂತಹ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.