ADVERTISEMENT

ಕೆಂಭಾವಿ: ಸಂಭ್ರಮದ ಕಾಳಿಕಾ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 10:04 IST
Last Updated 11 ಜೂನ್ 2013, 10:04 IST

ಕೆಂಭಾವಿ: ಪಟ್ಟಣದ ಕಾಳಿಕಾ ದೇವಿ ದೇವಸ್ಥಾನದಲ್ಲಿ ಉಡಿ ತುಂಬುವ ಜಾತ್ರಾ ಮಹೋತ್ಸವ ಈಚೆಗೆ ಸಡಗರ ಸಂಭ್ರಮದ ಮಧ್ಯೆ ನೆರವೇರಿತು.

ಪ್ರತಿ ವರ್ಷ ವೈಶಾಖ ಮಾಸದ ಕಡೆ ಯ ಶುಕ್ರವಾರ ನಡೆಯುವ ಈ ಉತ್ಸವದಲ್ಲಿ ಕೆಂಭಾವಿ ಹಾಗೂ ಸುತ್ತಲಿನ ಅನೇಕ ಗ್ರಾಮಸ್ಥರು ಭಾಗವಹಿಸಿದ್ದ ರು.

ಅನೇಕ ವರ್ಷಗಳಿಂದ ನಡೆದು ಬಂದ ಈ ಉತ್ಸವದಲ್ಲಿ ಮಳೆ ಬೆಳೆ ಸಮೃದ್ಧಿಯಾಗಿ ದೇಶದೆಲ್ಲೆಡೆ ಸುಖ ಶಾಂತಿ ನೆಲೆಸಲಿ. ದುಷ್ಟರ ಸಂಹಾರವಾಗಿ ಶಿಷ್ಟರ ಪರಿಪಾಲನೆಯಾಗಲಿ ಎಂಬ ಘೋಷಣೆಯೊಂದಿಗೆ ಭಕ್ತರು ಪಾಲ್ಗೊಳ್ಳುತ್ತಾರೆ.

ಸಂಪ್ರದಾಯದಂತೆ ಅನೇಕ ಭಜನಾ ಮಂಡಳಿಗಳಿಂದ ಭಜನೆ, ಸಂಗೀತೋತ್ಸವ ಸೇರಿದಂತೆ ನಾನಾ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ದೇವಿಗೆ ಕಾಕಡಾರತಿ, ಪೂಜೆ, ಅಲಂಕಾರ, ಮುತ್ತೈದೆಯರಿಗೆ ಉಡಿ ತುಂಬುವುದೂ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಪ್ರಸಾದ ವಿತರಣೆಯೊಂದಿಗೆ ಉತ್ಸವ ಮುಕ್ತಾಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.