ADVERTISEMENT

ಚನ್ನೂರ: ಪಿಕ್‌ಅಪ್ ಲೊಕಾಯುಕ್ತರಿಗೆ ದೂರು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2012, 8:10 IST
Last Updated 6 ನವೆಂಬರ್ 2012, 8:10 IST

ಹುಣಸಗಿ: ಸಮೀಪದ ಚನ್ನೂರ ಗ್ರಾಮದ ಬಳಿ ಹಿರೆಹಳ್ಳಕ್ಕೆ ನಿರ್ಮಿಸಲಾಗಿರುವ ಚನ್ನೂರ ಪಿಕ್‌ಅಪ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಮತ್ತು. ಸಮರ್ಪಕವಾಗಿ ನೀರು ಹರಿಸದೇ ರೈತರಿಗೆ ಅನುಕೂಲ ಕಲ್ಪಿಸಲಾಗಿಲ್ಲ ಎಂದು ಆರೋಪಿಸಿ ಕಲ್ಲದೇವನಹಳ್ಳಿ, ಹೆಬ್ಬಾಳ, ಕಚಕನೂರ ಗ್ರಾಮದ ರೈತರು ಲೊಕಾಯುಕ್ತ ಮೊರೆ ಹೊಗಿದ್ದಾರೆ.

ಕೃಷ್ಣಾ ಭಾಗ್ಯಜಲ ನಿಗಮದ ಹುಣಸಗಿ ವಿಭಾಗದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಲು ಈ ಪಿಕ್‌ಅಪ್ ನಿರ್ಮಿಸಲಾಗಿದ್ದು, ಸರಿಯಾದ ಪ್ರಮಾಣದಲ್ಲಿ ನಿಯಮಿತ ಅವಧಿಯಲ್ಲಿ ನಿರ್ಮಾಣವಾಗದೇ ಇದ್ದುದರಿಂದ ಇನ್ನೂ ರೈತರ ಜಮೀನುಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ ಎಂದು ರೈತರು ಹೇಳುತ್ತಾರೆ.  ಅಲ್ಲದೇ ಮಳೆ ಬಂದಾಗ ಕಾಲುವೆ ಮೇಲ್ಬಾಗದಲ್ಲಿರುವ ಗುಡ್ಡದ ನೀರು ಕಾಲುವೆಗೆ ನುಗ್ಗಿ ಅಲ್ಲಲ್ಲಿ ಕಾಲುವೆ ಒಡೆಯುವ ಹಂತ ತಲುಪಿದೆ.

ಅಲ್ಲದೇ ನಿಯಮಿತ ಸ್ಥಳದಲ್ಲಿ ಸಿಡಿ ನಿರ್ಮಾಣ ಮಾಡಿಲ್ಲ. ಇದರಿಂದಾಗಿ ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸಲು ಸಾಧ್ಯವಾಗಿಲ್ಲ ಎಂದು ಮನವಿ ಪತ್ರದಲ್ಲಿ ಪತ್ರದಲ್ಲಿ ತಿಳಿಸಿದ್ದಾರೆ.
ಇದರಲ್ಲಿ ನಿಗಮದ ತಾಂತ್ರಿಕ ಸಿಬ್ಬಂದಿಯ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣಿಸುತ್ತಿದೆ.

ಈ ಕುರಿತು ನಿಗಮದ ಕಚೇರಿ, ಶಾಖಾ ಕಚೇರಿ, ವಿಭಾಗಿಯ ಕಚೇರಿ ಮುಂದೆ ಹಲವಾರು ಬಾರಿ ದಿನವಿಡಿ ಪ್ರತಿಭಟನೆ ನಡೆಸಿದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಕಲ್ಲದೇವನಹಳ್ಳಿಯ ಸಿದ್ದಲಿಂಗಯ್ಯ ಹಿರೇಮಠ, ಕಲ್ಲಪ್ಪ ಐಕೂರ, ಭೀಮರಾಯಗೌಡ, ಬಸಣ್ಣ ಚಟ್ಟಿ, ನಂದನಗೌಡ, ಪರಮಾನಂದ, ರಾಜೇಸಾಬ ಚಂದಾನೂರ ಸೇರಿದಂತೆ ಇತರರು ಹುಣಸಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಲೋಕಾಯುಕ್ತ ಡಿ.ವೈ.ಎಸ್.ಪಿಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.