ADVERTISEMENT

ಚರಂಡಿಯಾಗುವ ರಸ್ತೆ: ಜನತೆಯ ಗೋಳು

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 10:02 IST
Last Updated 11 ಜೂನ್ 2013, 10:02 IST

ಕೆಂಭಾವಿ: ಪಟ್ಟಣದಲ್ಲಿ ಸ್ವಲ್ಪ ಮಳೆ ಬಂದರೆ ಸಾಕು, ಇಲ್ಲಿನ ಮುಖ್ಯ ರಸ್ತೆ ಮಳೆ ನೀರಿನಿಂದ ಚರಂಡಿಯಾಗಿ ಪರಿವ ರ್ತನೆ ಆಗುತ್ತದೆ. ಇದರಿಂದ ಪ್ರತಿವರ್ಷ ರಸ್ತೆ ಸಂಪೂರ್ಣ ಹಾಳಾಗುತ್ತಿದ್ದು, ಕೇಳು ವವರೇ ಇಲ್ಲದಂತಾಗಿದೆ.

ಮಳೆ ಬಂತೆಂದರೆ ಇಲ್ಲಿ ನೀರಿನ ಪ್ರವಾ ಹವೇ ಬಂದು ಕೆರೆಯಂತೆ ಮಾರ್ಪಾ ಟಾಗುತ್ತದೆ. ಇದರಿಂದ ಜನತೆಗೆ ತೀವ್ರ ತೊಂದರೆಯಾಗಿದ್ದು, ಓಡಾಡಲು ಸ್ಥಳವಿಲ್ಲದೇ ಜನತೆ ಅಸಹಾಯ ಕರಾಗಿದ್ದಾರೆ. ನಿಂತ ಚರಂಡಿ ನೀರು ವಾರಗಟ್ಟಲೆ ಅಲ್ಲಿಯೇ ಶೇಖರಣೆ ಆಗುತ್ತಿದ್ದು, ಇದರಿಂದ ದುರ್ವಾಸನೆ ಬೀರುತ್ತಿದೆ.

ಸುತ್ತಲಿನ ವ್ಯಾಪಾರಿಗಳು, ಪಾದಚಾರಿಗಳು ಮೂಗು ಮುಚ್ಚಿ ಕೊಂಡು ಓಡಾಡುವಂತಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೆಲ್ಲ ಇಲ್ಲಿ ಇದೇ ಸ್ಥಿತಿ ಮುಂದುವರಿಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರದೇಶ ಇದಾಗಿದ್ದು, ಇಲ್ಲಿಯೇ ಅನೇಕ ಅಂಗಡಿ ಮುಂಗಟ್ಟುಗಳು, ದೇವಸ್ಥಾನ ಗಳು, ಕಚೇರಿಗಳಿವೆ.
 

ನಿತ್ಯ ಸಂಚರಿಸುವ ಜನತೆಗೆ ತೊಂದರೆಯಾಗಿದೆ. ಇಲ್ಲಿ ನಿಲ್ಲುವ ಚರಂಟಿ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಜನರಲ್ಲಿ ಭಯ ಮೂಡಿಸಿದೆ. ಶೀಘ್ರ ಚರಂಡಿ ಸ್ವಚ್ಛಗೊಳಿಸಿ, ಈ ತೊಂದರೆ ನಿವಾರಿಸುವಂತೆ ನಾಗರಡ್ಡಿ ಧರಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT