ADVERTISEMENT

‘ಧರ್ಮ ಒಡೆಯುವ ರಾಜಕಾರಣ ಸಲ್ಲ

ಯಡಿಯಾಪುರದಲ್ಲಿ ಶ್ರೀರಾಮನವಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 12:24 IST
Last Updated 27 ಮಾರ್ಚ್ 2018, 12:24 IST
ಕೆಂಭಾವಿ ಸಮೀಪದ ಯಡಿಯಾಪುರ ಗ್ರಾಮದಲ್ಲಿ ಬಜರಂಗಿ ಸೇವಾದಳ ಸೋಮವಾರ ಹಮ್ಮಿಕೊಂಡಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಜಿಲ್ಲಾ ಸಂಚಾಲಕ ಶೀತಲ್ ಜೈನ್ ಮಾತನಾಡಿದರು
ಕೆಂಭಾವಿ ಸಮೀಪದ ಯಡಿಯಾಪುರ ಗ್ರಾಮದಲ್ಲಿ ಬಜರಂಗಿ ಸೇವಾದಳ ಸೋಮವಾರ ಹಮ್ಮಿಕೊಂಡಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಜಿಲ್ಲಾ ಸಂಚಾಲಕ ಶೀತಲ್ ಜೈನ್ ಮಾತನಾಡಿದರು   

ಕೆಂಭಾವಿ: ‘ಧರ್ಮ ಹಾಗೂ ಜಾತಿಗಳನ್ನು ಒಡೆದು ರಾಜಕೀಯ ಮಾಡುತ್ತಿರುವ ರಾಜಕಾರಣಿಗಳಿಗೆ ಬುದ್ಧಿಕಲಿಸಲು ಹಿಂದೂಗಳು ಒಂದಾಗಬೇಕು’ಎಂದು ಶ್ರೀರಾಮ ಸೇನೆ ಜಿಲ್ಲಾ ಸಂಚಾಲಕ ಶೀತಲ್ ಜೈನ್ ಹೇಳಿದರು.

ಸಮೀಪದ ಯಡಿಯಾಪುರ ಗ್ರಾಮದಲ್ಲಿ ಬಜರಂಗಿ ಸೇವಾದಳದ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಮನವಮಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶ್ರೀರಾಮ ಹಿಂದೂ ಸಮಾಜಕ್ಕೆ ಪ್ರೇರಣೆ. ರಾಮನ ಹೆಸರಿನಲ್ಲಿಯೇ ನಾವು ಇಂದು ಬದುಕುತ್ತಿದ್ದೇವೆ. ಸಮಾಜವನ್ನು ಒಡೆದಾಳುವ ರಾಜಕಾರಣಿಗಳಿಗೆ ಬುದ್ಧಿ ಕಲಿಸುವ ಸಕಾಲ ಕೂಡಿಬಂದಿದೆ’ ಎಂದರು.

ADVERTISEMENT

‘ಇಂದಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ದುಷ್ಟಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂತವರನ್ನು ವ್ಯಸನ ಮುಕ್ತರನ್ನಾಗಿಸಲು ಸಂಘಟನೆಯಿಂದ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಇಂದು ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಗೋಹತ್ಯೆಯೇ ಕಾರಣ.ಗೋವುಗಳ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು’ ಎಂದು ಹೇಳಿದರು.

ಹೇಮರಡ್ಡಿಮಲ್ಲಮ್ಮ ಸಂಸ್ಥೆಯ ಕಾರ್ಯದರ್ಶಿ ವೈ.ಟಿ.ಪಾಟೀಲ ಮಾತನಾಡಿ, ‘ನಮ್ಮ ಧರ್ಮದ ಜತೆಗೆ ಅನ್ಯ ಧರ್ಮಿಯರನ್ನು ಪ್ರೀತಿಸಬೇಕು. ದುಶ್ಚಟಗಳನ್ನು ಬಿಟ್ಟು ಗುರುಹಿರಿಯರನ್ನು ಗೌರವಿಸಬೇಕು. ಉತ್ತಮ ಸಂಸ್ಕಾರಗಳಿಂದ ಎಲ್ಲರ ಮನಸ್ಸನ್ನು ಗೆಲ್ಲಬಹುದು’ ಎಂದು ಹೇಳಿದರು.

ಹಿರೇಮಠದ ಮಲ್ಲಿಕಾರ್ಜುನಯ್ಯ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಚನ್ನವೀರಯ್ಯ ಸ್ವಾಮಿ, ವಕೀಲ ಎಸ್.ಎಂ. ಕನಕರಡ್ಡಿ, ರಾಜಶೇಖರ ಪೊಲೀಸ್‌ ಪಾಟೀಲ, ನರಸಿಂಹರಡ್ಡಿ, ಮಲ್ಲಣ್ಣ ಪುಜಾರಿ ಏವೂರಕರ್, ಶರಣು ನಾಯಕ್, ಶಾಂತಗೌಡ ಪೊಲೀಸ್‌ ಪಾಟೀಲ, ಬಾಬುಗೌಡ ಪೊಲೀಸ್‌ ಪಾಟೀಲ, ಶಾಂತಗೌಡ ಏವೂರಕರ್, ತಮ್ಮನಗೌಡ ಪಾಟೀಲ, ಮಲಕನಗೌಡ ಪೊಲೀಸ್‌ ಪಾಟೀಲ, ತಮ್ಮನಗೌಡ ಮಾಲಿ ಪಾಟೀಲ, ಹಯ್ಯಾಳಪ್ಪ ಮೇಟಿ, ಕನಕಾಚಲ ನಾಯಕ ಜಾಹಗೀರದಾರ, ಮಲಕಪ್ಪ ನೇಗಿನಾಳ, ಮಡಿವಾಳಪ್ಪ ಬಡಗೇರ, ಎಎಸ್‌ಐ ಸತ್ಯನಾರಾಯಣ, ಸಂತೋಷ ಹಿರೇಮಠ ಇದ್ದರು.

ವೆಂಕನಗೌಡ ಪಾಟೀಲ ನಿರೂಪಿಸಿದರು. ಮಲ್ಲಿಕಾರ್ಜುನ ಕುಂಬಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.