ADVERTISEMENT

ನಂದೇಪಲ್ಲಿ ಹಳ್ಳಕ್ಕೋ..ಕೃಷ್ಣಾ ನದಿಗೋ..

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 10:55 IST
Last Updated 12 ಮಾರ್ಚ್ 2011, 10:55 IST

ಯಾದಗಿರಿ: ಜಿಲ್ಲೆಯ ಗಡಿಗೆ ಹೊಂದಿ ಕೊಂಡಿರುವ ಆಂಧ್ರಪ್ರದೇಶದ ಸಂಗಮ ಬಂಡಾ ಪ್ರದೇಶದಲ್ಲಿ ಹಳ್ಳಕ್ಕೆ ಅಡ್ಡ ಲಾಗಿ ಬೃಹತ್ ಪ್ರಮಾಣದ ಬ್ಯಾರೇಜ್ ನಿರ್ಮಿಸಲಾಗುತ್ತಿದ್ದು, ಈ ಬ್ಯಾರೇಜ್ ಅನ್ನು ನಂದೇಪಲ್ಲಿ ಹಳ್ಳಕ್ಕೆ ಅಡ್ಡಲಾಗಿ ಕಟ್ಟಲಾಗುತ್ತಿದೆಯೋ ಅಥವಾ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗು ತ್ತದೆಯೋ ಎಂಬ ಜಿಜ್ಞಾಸೆ ಇದೀಗ ಆರಂಭವಾಗಿದೆ.

ಬ್ಯಾರೇಜ್ ಕುರಿತು ಮಾಧ್ಯಮಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿಗಳು ಸಮಿತಿ ರಚಿಸಿದ್ದು, ಅಧ್ಯ ಯನ ನಡೆಸಿದ ಸಮಿತಿ ನೀಡಿರುವ ವರದಿಯೇ ಈ ಜಿಜ್ಞಾಸೆಗೆ ಕಾರಣ ವಾಗಿದೆ. ಜಿಲ್ಲಾ ಪಂಚಾಯಿತಿ ಎಂಜಿನಿ ಯರಿಂಗ್ ಕಾರ್ಯಪಾಲಕ ಎಂಜಿನಿ ಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್  ಹಾಗೂ ಸಣ್ಣ ನೀರಾವರಿ ಉಪವಿಭಾಗದ ಅಧಿಕಾರಿ ಗಳನ್ನು ಒಳಗೊಂಡ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ವರದಿ ಸಿದ್ಧಪಡಿಸಿದ್ದು, ಮಾರ್ಚ್ 9 ರಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ.

ವರದಿಯ ಪ್ರಕಾರ ಆಂಧ್ರಪ್ರದೇಶದ ಮೆಹಬೂಬನಗರ ಜಿಲ್ಲೆಯಲ್ಲಿ ನಿರ್ಮಿಸ ಲಾಗುತ್ತಿರುವ ಸಂಗಮಬಂಡಾ ಜಲಾ ಶಯಕ್ಕೆ ಭೇಟಿ ನೀಡಿ ಯೋಜನೆಯ ಸ್ಥಳ ಪರಿಶೀಲಿಸಲಾಗಿದೆ ಎಂದು ತಿಳಿಸಿದೆ. ಆದರೆ ವಾಸ್ತವವಾಗಿ ಸಂಗಮ ಬಂಡಾ ಬ್ಯಾರೇಜ್ ಅನ್ನು ಕೃಷ್ಣಾ ನದಿಯ ಬದಲಾಗಿ ನಂದೇಪಲ್ಲಿ ಹಳ್ಳಕ್ಕೆ ನಿರ್ಮಿಸಲಾಗುತ್ತಿದೆ. ಅಲ್ಲದೇ ಉಜ್ಜಿಲೆ ಹಾಗೂ ಯಾದಗಿರಿ ತಾಲ್ಲೂಕಿನ ಗ್ರಾಮ ಗಳಾದ ಈಡ್ಲೂರು, ಚೆಲ್ಹೇರಿ, ಸಂಕ್ಲಾ ಪುರ ಗ್ರಾಮಸ್ಥರ ಜೊತೆ ಚರ್ಚಿಸ ಲಾಗಿದ್ದು, ಈ ಜಲಾಶಯದಿಂದ ಹೊರಹೋಗುವ ನೀರನ್ನು ತಡೆದಾಗ ಮಾತ್ರ ಉಜ್ಜಿಲೆ ಹಾಗೂ ತಾಲ್ಲೂಕಿನ ಮೂರು ಗ್ರಾಮಗಳಲ್ಲಿ ಮಾತ್ರ ಹಿನ್ನೀರು ಬರುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಉಜ್ಜಿಲೆ ಗ್ರಾಮ ಮುಳುಗಡೆ ಆಗುವ ಹಿನ್ನೆಲೆಯಲ್ಲಿ ಗ್ರಾಮವನ್ನು ಸ್ಥಳಾಂತರಿಸಲಾಗಿದೆ. ಯಾದಗಿರಿ ತಾಲ್ಲೂಕಿನ ಚೆಲ್ಹೇರಿ, ಈಡ್ಲೂರು, ಸಂಕ್ಲಾಪುರ ಗ್ರಾಮಗಳು ಉಜ್ಜಿಲೆ ಗ್ರಾಮದಿಂದ ಮೂರು ಕಿ.ಮೀ. ದೂರವಿದ್ದು, ಉಜ್ಜಿಲೆ ಗ್ರಾಮ ಕ್ಕಿಂತ ಎತ್ತರ ಪ್ರದೇಶದಲ್ಲಿವೆ. ಹಾಗಾಗಿ ತಾಲ್ಲೂಕಿನ ಗ್ರಾಮಗಳಿಗೆ ಯಾವುದೇ ಹಾನಿ ಇಲ್ಲ. ಬದಲಾಗಿ ಕರ್ನಾಟಕದ ಸಾಕಷ್ಟು ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ದ್ವಂದ್ವಗಳ ಸರಮಾಲೆ: ವರದಿ ಯಲ್ಲಿ ಉಲ್ಲೇಖಿಸಿರುವ ಅಂಶಗಳಿಗೂ, ವಾಸ್ತವಾಂಶಕ್ಕೂ ಸಾಕಷ್ಟು ವ್ಯತ್ಯಾಸ ವಿದ್ದು, ವರದಿಯಲ್ಲಿಯೇ ದ್ವಂದ್ವಗಳು ಸ್ಪಷ್ಟವಾಗಿ ಕಾಣುತ್ತಿವೆ. ಮೊದಲನೇ ಯದ್ದಾಗಿ ಈ ಬ್ಯಾರೇಜ್ ಅನ್ನು ನಂದೇಪಲ್ಲಿ ಹಳ್ಳಕ್ಕೆ ನಿರ್ಮಿಸಲಾಗು ತ್ತಿದೆ. ಆದರೆ ವರದಿಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಎಂದು ಹೇಳಲಾ ಗಿದೆ.

ಆದರೆ ಜಿಲ್ಲೆಯ ಛೆಲೇರಿ, ಸಂಕಲಾ ಪುರ, ಈಡ್ಲೂರು ಗ್ರಾಮಗಳು ಈ ಬ್ಯಾರೇಜ್‌ನ ಹಿನ್ನೀರಿನಲ್ಲಿ ಮುಳುಗಡೆ ಆಗುವುದು ನಿಶ್ಚಿತ ಎನ್ನುತ್ತಾರೆ ಚೆಲ್ಹೇರಿಯ ದ್ರಾವಿಡರಾಜ ಹೇಳು ತ್ತಾರೆ. ಕಳೆದ ವರ್ಷ ಮಳೆಗಾಲದಲ್ಲಿ ಪ್ರವಾಹ ಬಂದಿದ್ದು, ಹಳ್ಳದ ನೀರು ಚೆಲ್ಹೇರಿ ಗ್ರಾಮಕ್ಕೆ ನುಗ್ಗಿತ್ತು. ಗ್ರಾಮದ ಸುತ್ತಲೂ ನೀರು ಆವರಿಸಿತ್ತು. ಬ್ಯಾರೇಜ್ ಇಲ್ಲದಿರುವಾಗಲೇ ಗ್ರಾಮ ದಲ್ಲಿ ಪ್ರವಾಹದ ಪರಿಸ್ಥಿತಿ ತಲೆ ದೋರುತ್ತದೆ. ಇನ್ನು ಬ್ಯಾರೇಜ್‌ನಲ್ಲಿ ನೀರು ಸಂಗ್ರಹಣೆ ಆರಂಭವಾದರೇ ಗ್ರಾಮಗಳನ್ನು ದೇವರೇ ಕಾಪಾಡಬೇಕು ಎನ್ನುತ್ತಾರೆ ಚೆಲ್ಹೇರಿಯ ರಾಘವೇಂದ್ರ.
ವರದಿಯಲ್ಲಿ ಒಂದೆಡೆ ಯಾದಗಿರಿ ತಾಲ್ಲೂಕಿನ ಮೂರೂ ಹಳ್ಳಿಗಳ ಗ್ರಾಮಸ್ಥರ ಜೊತೆ ಚರ್ಚಿಸಿದ್ದು, ಈ ಜಲಾಶಯದಿಂದ ಹೊರಹೋಗುವ ನೀರನ್ನು ತಡೆದಾಗ ಮಾತ್ರ ಗ್ರಾಮಗಳಲ್ಲಿ ಹಿನ್ನೀರು ಬರುತ್ತದೆ ಎಂದು ಹೇಳಲಾಗಿದೆ.

ಆದರೆ ಇದೇ ವರದಿಯಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ರಾಜ್ಯದ ಗಡಿಗ್ರಾಮಗಳಿಗೆ ಯಾವುದೇ ಹಾನಿ ಇಲ್ಲ ಎಂಬ ಅಭಿಪ್ರಾಯವನ್ನೂ ವರದಿ ವ್ಯಕ್ತಪಡಿಸಿದೆ. ಸಂಗಮಬಂಡಾ ಬ್ಯಾರೇಜ್ ನಿರ್ಮಾಣದ ವಿಷಯದಲ್ಲಿ ಸಲ್ಲಿಸಲಾಗಿ ರುವ ವರದಿಯಲ್ಲಿ ಹಲವಾರು ಗೊಂದಲಗಳಿದ್ದು, ಈ ಬಗ್ಗೆ ಕೂಲಂಕಷ ಪರಿಶೀಲನೆ ಆಗಬೇಕು ಎಂಬುದು ಮುಳುಗಡೆ ಭೀತಿ ಎದುರಿಸುತ್ತಿರುವ ಗ್ರಾಮಗಳ ಜನರ ಮನವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.