ಯಾದಗಿರಿ: ಬಿಎಸ್‌ಎನ್‌ಎಲ್ ಸಂಸ್ಥೆ ಹೆಮ್ಮೆಯ ರಾಷ್ಟ್ರೀಯ ಸಂಸ್ಥೆಯಾಗಿದೆ. ಪ್ರಾಮಾಣಿಕ ಸೇವೆ ಪ್ರತಿಯೊಬ್ಬರ ಜೀವನದ ಗುರಿಯಾಗಿರಲಿ. ಪ್ರತಿಯೊಬ್ಬ ನೌಕರ ಬಿಎಸ್‌ಎನ್‌ಎಲ್ ನೌಕರನೆಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಸಿ.ಎಂ. ಪಟ್ಟೇದಾರ ಹೇಳಿದರು.
ಇಲ್ಲಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುಲ್ಬರ್ಗ ವಿಭಾಗದ ಬಿಎಸ್‌ಎನ್‌ಎಲ್ ನೌಕರರ ತೃತೀಯ ಜಿಲ್ಲಾ ಸಮಾವೇಶ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಅನ್ನ ನೀಡುವ ಸಂಸ್ಥೆಗೆ ನಿಮ್ಮ ನಿಷ್ಠೆಯಿರಲಿ. ಪ್ರಾಮಾಣಿಕ ಸೇವೆಯಿಂದ ಒಳ್ಳೆಯ ಶ್ರೇಯಸ್ಸು ಲಭಿಸುತ್ತದೆ ಎಂದು ಹೇಳಿದರು.
ರಾಷ್ಟ್ರದ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರ ಬಹಳ ಮುಖ್ಯವಾಗಿದ್ದು, ಜನರ ಹಾಗೂ ಗ್ರಾಹಕರ ಸೇವೆ ನಿಮ್ಮ ಧ್ಯೇಯವಾಗಿರಲಿ ಎಂದು ಸಲಹೆ ನೀಡಿದರು.
ನೌಕರರ ಸಂಘದ ಕರ್ನಾಟಕ ವಲಯ ಕಾರ್ಯದರ್ಶಿ ಕೆ.ಎಸ್. ಶೇಷಾದ್ರಿ, ನಮಗೆ ನಮ್ಮ ಹಿತಾಸಕ್ತಿಗಿಂತ ರಾಷ್ಟ್ರದ ಅಭಿವೃದ್ಧಿ ಮುಖ್ಯ. ರಾಷ್ಟ್ರೀಯ ಪ್ರಗತಿಗೆ ಶ್ರಮಿಸುತ್ತಿರುವ ಬಿಎಸ್‌ಎನ್‌ಎಲ್ ಸಂಸ್ಥೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಧ್ಯೇಯ ಹೊಂದಿದೆ ಎಂದರು.
ಇತರ ಸಂಸ್ಥೆಗಳಿಗಿಂತ ಭಿನ್ನವಾಗಿ ಬಿಎಸ್‌ಎನ್‌ಎಲ್ ನೌಕರರು ತಮ್ಮ ಹಿತಾಸಕ್ತಿಯ ಜೊತೆಗೆ ಸಂಸ್ಥೆಯ ಅಭ್ಯುದಯಕ್ಕಾಗಿ ಸಂಘ ಕಟ್ಟಿಕೊಂಡಿರುವುದಾಗಿ ಹೇಳಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮರೆಮ್ಮೋ ಶಾಣ್ಯಾನೋರ್ ಕಾರ್ಯಕ್ರಮ ಉದ್ಘಾಟಿಸಿದರು.
ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲಕ್ಷ್ಮಿ ಚಂಡ್ರಿಕಿ, ಬಿಎಸ್‌ಎನ್‌ಎಲ್ ನೌಕರರ ಸಂಘದ ರಾಯಚೂರ ಜಿಲ್ಲಾ ಘಟಕದ ಕಾರ್ಯದರ್ಶಿ ಮುನಿಯಪ್ಪ, ವಿಭಾಗೀಯ ಎಂಜಿನಿಯರ್ ಎ.ಡಿ. ಮಹಿಷಿ, ಗುಲ್ಬರ್ಗ ಜಿಲ್ಲಾ ಘಟಕದ ಕಾರ್ಯದರ್ಶಿ ಕಿಷ್ಟಯ್ಯ. ಶಿವಮೂರ್ತಿ, ಕೆ.ಎನ್ ಬೆಲ್ಲದ ಇದ್ದರು. ಸುಷ್ಮಾ ಪ್ರಾರ್ಥಿಸಿದರು. ವೆಂಕಟೇಶ ಸ್ವಾಗತಿಸಿದರು. ಮೊಹ್ಮದ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.