ಬೆಂಗಳೂರು: ತೈವಾನ್‌ನ ಫಾಕ್ಸ್‌ಕಾನ್ ಸಂಸ್ಥೆ ಕರ್ನಾಟಕದಲ್ಲಿ ಐಪೋನ್‌ಗಳ ಹೊರ ಕವಚ ತಯಾರಿಸುವ ಘಟಕ ಸ್ಥಾಪಿಸಲು ಸುಮಾರು ₹ 8,800 ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಫಾಕ್ಸ್‌ಕಾನ್ ಇಂಡಸ್ಟ್ರೀಯಲ್ ಇಂಟರ್ನೆಟ್ (FII) ಸಂಸ್ಥೆಯ ಸಿಇಒ Brand Cheng ನೇತೃತ್ವದ ನಿಯೋಗವನ್ನು ಭೇಟಿಮಾಡಿ ಬಳಿಕ ಅವರು ಈ ವಿಷಯ ತಿಳಿಸಿದರು.
ತುಮಕೂರಿನ ಬಳಿ ಇರುವ ಜಪಾನೀಸ್ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ 100 ಎಕರೆ ಭೂಮಿ ಇದ್ದು, ಉದ್ದಿಮೆ ಸ್ಥಾಪಿಸಲು ಒಳ್ಳೆಯ ವಾತಾವರಣ ಇದೆ. ಇದಕ್ಕೆ ರಾಜ್ಯ ಸರ್ಕಾರ ಕೂಡ ಪೂರ್ಣ ಸಹಕಾರ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಹೊಸ ಘಟಕದಿಂದ ಸುಮಾರು 14,000 ಕ್ಕೂ ಹೆಚ್ಚು ಉದ್ಯೋಗಗಳು ದೊರೆಯಲಿವೆ. ಉದ್ಯಮ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಫಾಕ್ಸ್‌ಕಾನ್ ನಿಯೋಗದ ಜೊತೆ ಎಂಬಿ ಪಾಟೀಲ್ ಅವರು ಸಭೆ ನಡೆಸಿದರು. ಐಟಿ-ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.