ADVERTISEMENT

ಬಸವಣ್ಣನಿಂದ ಸಹಬಾಳ್ವೆ ಜಾರಿ: ಯಾಳಗಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 7:45 IST
Last Updated 24 ಏಪ್ರಿಲ್ 2012, 7:45 IST

ಶಹಾಪುರ: ಬಸವಣ್ಣನವರು ಮನುಷ್ಯ ಸಮಾನತೆಯನ್ನು ಮಾತ್ರ ತರಲಿಲ್ಲ. ಅವರು ಮನುಷ್ಯ ಮನುಷ್ಯರ ನಡುವೆ ಸಹಬಾಳ್ವೆಯನ್ನು ಜಾರಿಗೊಳಿಸಿದರು. ಮನುಷ್ಯ ಸಮಾಜ ಒಂದಾಗಿ ಜೀವಿಸುವ ಪರಿಯನ್ನು ತಿಳಿಸಿಕೊಟ್ಟರು ಎಂದು  ಪ್ರೊ.ರಮೇಶ ಯಾಳಗಿ ನುಡಿದರು.

ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಈಚೆಗೆ ಹಮ್ಮಿಕೊಂಡಿದ್ದ ಬಸವ ಬೆಳಕು-8 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಸವಣ್ಣನವರಿಗಿಂತ ಪೂರ್ವದಲ್ಲಿ ನಾಗರಿಕ ಸಮಾಜದಲ್ಲಿರುವ ಸಾವಿರಾರು ಸಮಸ್ಯೆ, ಗೊಂದಲಗಳಿಗೆ ಮುಕ್ತಿ ನೀಡಿದರು. `ಅರಿದಡೆ ಶರಣ, ಮರೆತಡೆ ಮಾನವ~ ಎಂಬ ಮಹಾನ್ ತತ್ವಸಾರಿದರು ಎಂದು ಅವರು ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗುಲ್ಬರ್ಗದ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಬಸವರಾಜ ಮಾತನಾಡಿ, ಬಸವಾದಿ ಶರಣರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದರು. ಡಾ. ಭೀಮರಾಯ ಲಿಂಗೇರಿ ಪುಸ್ತಕ ಕುರಿತು ಮಾತನಾಡಿದರು.

ಪ್ರತಿಷ್ಠಾನದ ಸಂಚಾಲಕ ಲಿಂಗಣ್ಣ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನುಮಂತರಾಯ ಸಿಂದಗಿ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ವಕೀಲ ಆರ್.ಎಂ.ಹೊನ್ನಾರಡ್ಡಿ ವಂದಿಸಿದರು. ಗುರುಬಸವಯ್ಯ ಗದ್ದುಗೆ, ಡಾ.ಚಂದ್ರಶೇಖರ ಸುಬೇದಾರ, ಆರ್.ಎಸ್.ಹಳಗೊಂಡ, ನಿವೃತ್ತ ಎಂಜಿನಿಯರ್ ಭೀಮರಡ್ಡಿ, ಬಸವರಾಜ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಾಸೋಹಿಗಳಾದ ಪಂಪಣ್ಣಗೌಡ ಹಾಗೂ ಬಸಮ್ಮ ದಂಪತಿಯನ್ನು ಸನ್ಮಾನಿಸಲಾಯಿತು. ವಿಶ್ವಾರಾಧ್ಯ ಸತ್ಯಂಪೇಟೆ ಹಾಗೂ ಮೈಲಾರಪ್ಪ ಸಗರ ಬಸವ ಮಾರ್ಗದ ಹಾಡುಗಳನ್ನು ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.