ADVERTISEMENT

ಬೆಲೆ ಏರಿಕೆ: ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 9:20 IST
Last Updated 14 ನವೆಂಬರ್ 2012, 9:20 IST

ಹುಣಸಗಿ: ದಿನಬಳಕೆ ವಸ್ತುಗಳು, ದಿನಸಿ ಬೆಲೆ ಏರಿಕೆ ಮಧ್ಯೆಯೂ ಹುಣಸಗಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಖರೀದಿ ಜೋರಾಗಿಯೇ ನಡೆದಿದೆ. ಹುಣಸಗಿ, ಕೊಡೇಕಲ್ಲ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಂಗಳವಾರ ನರಕಚತುರ್ದಶಿ ಆಚರಿಸಿದ್ದರಿಂದ ಸೋಮವಾರ ಮತ್ತು ಮಂಗಳವಾರ ಹುಣಸಗಿಯಲ್ಲಿ ಹಬ್ಬದ ಖರೀದಿ ಭರ್ಜರಿಯಾಗಿ ನಡೆದಿತ್ತು.

ಕಳೆದ ವರ್ಷಕ್ಕಿಂತ ಈ ಬಾರಿ ಹೂವು, ಹಣ್ಣು, ತರಕಾರಿ, ಆಕಾಶಬುಟ್ಟಿಗಳ ಬೆಲೆ ಗಗನಕ್ಕೆರಿದ್ದರೂ ಹಬ್ಬದ ಆಚರಣೆ ಮಾಡಬೇಕಲ್ಲವೇ ಆಚರಣೆ ಬಿಡಲು ಬರುವುದಿಲ್ಲ ಎಂದು ಬಲಶೆಟ್ಟಿಹಾಳ ಗ್ರಾಮದ ಬಸಮ್ಮ ಹೇಳಿದರು.

ಕುಂಬಳಕಾಯಿಗೆ ಬೇಡಿಕೆ: ದೀಪಾವಳಿಗೆ ಪ್ರತಿಯೊಬ್ಬರೂ ತಮ್ಮ ವಾಹನ ಪೂಜೆಗೆ ಕರಿಕುಂಬಳಕಾಯಿ ಬಳಸುವುದರಿಂದ ಅದರ ಬೆಲೆ ನೂರರಿಂದ ನೂರಾ ಐವತ್ತು ರೂಪಾಯಿ ವರೆಗೂ ಮಾರಾಟ ಮಾಡಲಾಗುತ್ತಿದೆ.

ಕೈಸುಡುವ ಪಟಾಕಿ: ಕಳೆದ ವರ್ಷಕ್ಕಿಂತ ಈ ಬಾರಿ ಪಟಾಕಿ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದಾಗಿ ಸರಾಸರಿ 60 ರಷ್ಟು ಮಾತ್ರ ಮಾರಾಟವಾಗುವ ಲಕ್ಷಣವಿದೆ ಎಂದು ಪಟಾಕಿ ವ್ಯಾಪಾರಿ ಪುರುಷೋತ್ತಮ ಠವಾಣಿ ಹೇಳುತ್ತಾರೆ.

ಚಂಡುಹೂ, ಸೇವಂತಿಗೆ, ಬಾಳೆದಿಂಡು, ತೆಂಗಿನಗರಿ ಕನಕಾಂಬರ ಹೂವಿನ ವ್ಯಾಪಾರ ಮಾತ್ರ ಭರ್ಜರಿಯಾಗಿತ್ತು. ಎರಡು ಕಟ್ಟು ಹೂಗಿಡಕ್ಕೆ ನೂರರಿಂದ ನೂರಾಪ್ಪತ್ತು ವರೆರೆ ಸಿಗುತ್ತಿದೆ.

ಪ್ರತಿ ದೀಪಾವಳಿಗೆ ಬಜಾರ್ ಪೂರ್ತಿ ಜನರಿಂದ ತುಂಬಿರುತ್ತಿತ್ತು. ಆದರೆ ಬಹುತೇಕ ಹಳ್ಳಿಗಳಲ್ಲಿ ತಾಂಡಾಗಳಲ್ಲಿ ಗುಳೇ ಹೊಗಿದ್ದರಿಂದ ವ್ಯಾಪಾರ ತಕ್ಕಮಟ್ಟಿಗೆ ಇದೆ ಎಂದು ತೆಂಗಿನ ಕಾಯಿ ವ್ಯಾಪಾರಿ ಸಿದ್ದು ರೇವಡಿ ಹೇಳುತ್ತಾರೆ.

ಕಳೆದ ಬಾರಿ ಎರಡನೆ ಹಂಗಾಮಿಗೆ ಸರಿಯಾದ ಪ್ರಮಾಣದಲ್ಲಿ ನೀರು ಬರದೇ ಇದ್ದುದರಿಂದ ಮತ್ತು ಈ ಬಾರಿ ಬತ್ತದ ಗದ್ದೆಗೆ ಬೀಜ ಗೊಬ್ಬರಕ್ಕಾಗಿ ಎಲ್ಲ ಹಣ ಖರ್ಚು ಮಾಡಿದ್ದರಿಂದ ದೀಪಾವಳಿ ಸಾಲ ಮಾಡಿಯೇ ಹಬ್ಬ ಮಾಡುವ ಅನಿವಾರ್ಯತೆ ಇದೆ ಎಂದು ಕೆಲವು ರೈತರು ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.