ADVERTISEMENT

ಬ್ಯಾಂಕ್‌ ಎದುರು ಅಖಂಡ ರೈತಸಂಘ ಪ್ರತಿಭಟನೆ

ಬೆಳೆ ಪರಿಹಾರ ಹಣ ಸಾಲಕ್ಕೆ ಮುರಿದುಕೊಳ್ಳದಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 10:44 IST
Last Updated 5 ಅಕ್ಟೋಬರ್ 2017, 10:44 IST

ಕೆಂಭಾವಿ: ಬೆಳೆ ಪರಿಹಾರದ ಹಣವನ್ನು ರೈತರ ಸಾಲದ ಖಾತೆಗೆ ಮುರಿದುಕೊಳ್ಳದೆ ನೇರವಾಗಿ ರೈತರಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಕೆಂಭಾವಿಯ ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರತಿವರ್ಷ ರೈತರು ಬ್ಯಾಂಕುಗಳಿಗೆ ಬೆಳೆವಿಮೆ ಪಾವತಿಸುತ್ತಿದ್ದರೂ ಪರಿಹಾರ ಧನ ಮಾತ್ರ ಬರುತ್ತಿಲ್ಲ. ಖಾಸಗಿ ವಿಮೆ ಕಂಪೆನಿಗಳ ಲಾಬಿಗೆ ಮಣಿದು ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು ಕಮಿಷನ್ ಆಸೆಗಾಗಿ ರೈತರಿಂದ ಹೆಚ್ಚಿನ ಪ್ರೀಮಿಯಂ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ.

ಅನಕ್ಷರಸ್ಥ ರೈತರಿಗೆ ಗೊತ್ತಿರದಂತೆ ಹೆಚ್ಚು ಪ್ರೀಮಿಯಂ ಬರುವ ಬೆಳೆಗಳ ಹೆಸರುಗಳನ್ನು ನಮೂದಿಸುತ್ತಿದ್ದಾರೆ’ ಎಂದು ಆಕ್ರೋಶ ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.