ಯಾದಗಿರಿ: ಜೂನ್ ಆರಂಭವಾಗುತ್ತಿದ್ದರೂ, ಮಳೆಯ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದಾಗಿ ಸಮೀಪದ ನಾಯ್ಕಲ್ ಗ್ರಾಮದ ಮುಸ್ಲಿಂ ಯುವಕರು ಮಳೆಗಾಗಿ ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದರು.
ಗ್ರಾಮದ ಮುಸ್ಲಿಂ ಸಮಾಜದ ಯುವಕರು ಸಮೀಪದ ಭೀಮಾ ನದಿಯಿಂದ ಕಾಲ್ನಡಿಗೆ ಮೂಲಕ ಕೊಡಗಳಲ್ಲಿ ನೀರು ತಂದು ಗ್ರಾಮದ ಹಜರತ್ ಅಬ್ಬಾಸಲಿ ದರ್ಗಾಕ್ಕೆ ನೀರು ನೀಡುವ ಮೂಲಕ ಮಳೆಗಾಗಿ ಪ್ರಾರ್ಥಿಸಿದರು.
ಮುಂಗಾರು ಹಂಗಾಮಿಗಾಗಿ ಮಳೆರಾಯ ಕೃಪೆ ತೋರದೇ ಇರುವುದರಿಂದ ಗ್ರಾಮದ ಯುವಕರು ದೇವರಿಗೆ ನೀರಿನ ಹರಕೆ ತೀರಿಸುವ ಮೂಲಕ ವರುಣನಿಗಾಗಿ ಪ್ರಾರ್ಥಿಸಿದರು.
ಅಬ್ಬಾಸಲೀ ಬಾಲೆಸನೋರ್, ಬಡೆಸಾಬ್, ಮಹ್ಮದ್ ಬಾರಪೆಟ್ ಸೇರಿದಂತೆ ಸುಮಾರು 50 ಕ್ಕೂ ಯುವಕರು ಪಾಲ್ಗೊಂಡಿದ್ದರು. ಅಲ್ಲದೆ ಗ್ರಾಮದ ಅನೇಕ ಕಡೆಗಳಲ್ಲಿ ದೇವರನ್ನು ಮಾಡುವ ಮೂಲಕ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.