ADVERTISEMENT

ಯಾದಗಿರಿ ನಗರಸಭೆ: ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 9:55 IST
Last Updated 11 ಜನವರಿ 2012, 9:55 IST
ಯಾದಗಿರಿ ನಗರಸಭೆ: ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಅಂಗೀಕಾರ
ಯಾದಗಿರಿ ನಗರಸಭೆ: ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಅಂಗೀಕಾರ   

ಯಾದಗಿರಿ: ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಯಲ್ಲಿದ್ದ ಯಾದಗಿರಿ ನಗರಸಭೆ ಅಧ್ಯಕ್ಷರ ರಾಜೀನಾಮೆ ವಿಚಾರಕ್ಕೆ ಕಡೆಗೂ ತೆರೆ ಬಿದ್ದಂತಾಗಿದೆ.

ನಗರಸಭೆಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ಮಂಗಳವಾರದಂದು ಕರೆದ ಸಭೆಯಲ್ಲಿ  ಅವಿಶ್ವಾಸ ಪರ 27 ಸದಸ್ಯರು ತಮ್ಮ ಬೆಂಬಲ ವ್ಯಕ್ತಪಡೆಸಿದ ಹಿನ್ನೆಲೆಯಲ್ಲಿ ಅಧ್ಯಕ್ಷೆ ನಾಗರತ್ನಾ ಮೂರ್ತಿ ಅನಪೂರ  ಸೋಲು ಅನುಭವಿಸಿದರು.

ಕಳೆದ ಡಿಸೆಂಬರ ತಿಂಗಳಲ್ಲಿ ಅಧ್ಯಕ್ಷರ ವಿರುದ್ಧ 12 ಜನ ಸಹಿ ಮಾಡಿ ಅರ್ಜಿ ಸಲ್ಲಿಸಿದ್ದರು. ಅಧ್ಯಕ್ಷರು ಸಭೆಯನ್ನು ಕರೆಯದ ಕಾರಣ ನ. 27  ರಂದು ಮತ್ತೆ 15 ಜನ ಸದಸ್ಯರು ಸಹಿ ಮಾಡಿ ಪೌರಯುಕ್ತರರಿಗೆ ಅರ್ಜಿ ಸಲ್ಲಿಸಿದ್ದರು. ಅದರ ಅಂಗವಾಗಿ ಮಂಗಳವಾರದಂದು   ರಂದು ವಿಶೇಷ ಸಭೆ ಕರೆಯಲಗಿತ್ತು.

ಒಟ್ಟು 31 ಸದಸ್ಯರಲ್ಲಿ 9 ಜನ ಕಾಂಗ್ರೆಸ್, 19 ಜೆಡಿಎಸ್ ಮತ್ತು 4 ಜನ ಸ್ವತಂತ್ರ ಸದಸ್ಯರು ಇದ್ದರು, ಇತ್ತೀಚಿಗೆ ಒಬ್ಬ ಸದಸ್ಯರ ನಿಧನದಿಂದ ಒಟ್ಟು 30 ಸದಸ್ಯರಲ್ಲಿ ಮಂಗಳವಾರದ ಸಭೆಯಲ್ಲಿ  26 ಜನ ಸದಸ್ಯರು ಮತ್ತು ಶಾಸಕ ಡಾ.ಎ.ಬಿ. ಮಾಲಕರಡ್ಡಿ  ಹಾಜರಾಗಿದ್ದರು. ಆದ್ಯಕ್ಷರು  ಸೇರಿ ಮೂವರು ಸದಸ್ಯರು ಗೈರು ಹಾಜರಿದ್ದರು.

ಪೌರಯುಕ್ತರು ಸಭೆ ಪ್ರಾರಂಭವಾಗುತ್ತಿದ್ದಂತೆ ಅವಿಶ್ವಾಸದ ಪರ ಮತ ಕೋರಿದಾಗ ಸಭೆಯಲ್ಲಿ ಹಾಜರಿದ್ದ ಶಾಸಕ ಡಾ. ಮಲಕರೆಡ್ಡಿ ಸೇರಿ 27 ಜನ ಸದಸ್ಯರ ಕೈಎತ್ತುವ ಮೂಲಕ ಮತ ಚಲಾಯಿಸಿದರು. ಇದರಿಂದಗಿ ನಿರೀಕ್ಷಿತ ಬೆಳವಣಿಗೆಯಂತೆ  ಅದ್ಯಕ್ಷರು ಸೋಲು ಅನುಭವಿಸಬೇಕಾಯಿತು.

ಪೌರಯುಕ್ತರು ಹಾಗೂ ಸಹಾಯಕ ಆಯುಕ್ತ  ಶರಣಪ್ಪ ಸತ್ಯಂ ಪೇಟೆ ಅವರು ಸಭೆಯಲ್ಲಿ ಹಾಜರಿದ್ದ ಎಲ್ಲ ಸದಸ್ಯರು ಆಧ್ಯಕ್ಷರ ವಿರುದ್ಧದ ಅವಿಶ್ವಾಸ ಪರ ಮತ ಹಾಕಿರುವುದರಿಂದ ಅಧ್ಯಕ್ಷರು ಇಂದಿನಿಂದ ತಮ್ಮ ಅಧಿಕಾರವನ್ನು ಕಳೆದುಕೊಂಡಿದ್ದಾರೆ ಎಂದು  ಘೋಷಣೆ ಮಾಡಿದರು. 

ಅಧ್ಯಕ್ಷರ ಪ್ರತಿಕ್ರಿಯೆ: ನಮ್ಮ ಪಕ್ಷದ ಸದಸ್ಯರು ವಿರೋಧ ಪಕ್ಷದ ಸದಸ್ಯರ ಆಮಿಷಕ್ಕೆ ಒಳಗಾಗಿ ನನ್ನ ವಿರುದ್ಧ ಮತ ಚಲಾಯಿಸಿದ್ದಾರೆ. ಅವರು ವಿರುದ್ಧ ಪಕ್ಷದ ವರಿಷ್ಠರು ಯಾವ ಕ್ರಮ ಜರಗಿಸುತ್ತಾರೆಂದು ಕಾದು ನೋಡಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.